ಉಜಿರೆ:(ಆ.28) ದ. ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ, ಗ್ರಾಮ ಪಂಚಾಯತ್ ಉಜಿರೆ ಇದರ ವತಿಯಿಂದ ಉಜಿರೆ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ 15 ನೇ ಹಣಕಾಸು ಯೋಜನೆ ಮತ್ತು

ಇದನ್ನೂ ಓದಿ: 🔴ಪುತ್ತೂರು: ಪುತ್ತೂರು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2024-25 ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಹಂತದ ಪರಿಶೋಧನಾಗ್ರಾಮ ಗ್ರಾಮ ಸಭೆ ಇಂದು ಉಜಿರೆ ಗ್ರಾಮ ಪಂಚಾಯತ್ ಸುವರ್ಣ ಸೌಧ ಸಭಾಭವನದಲ್ಲಿ ನಡೆಯಿತು.



ಸಭೆಯಲ್ಲಿ ಗ್ರಾಮಸ್ಥರು, ಶಾಲಾ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು.
ಶಿಕ್ಷಕರು :
ಸ.ಹಿ. ಪ್ರಾ ಶಾಲೆ ಗುರಿಪಳ್ಳ ಇಲ್ಲಿ ಶೌಚಾಲಯ ದುರಸ್ಥಿ ಮಾಡಿಕೊಳ್ಳಲು ಬೇಡಿಕೆ, ಮತ್ತು ಸ.ಹಿ. ಪ್ರಾ ಶಾಲೆ ಹಳೆಪೇಟೆಯಲ್ಲಿ ಶಾಲೆಗೆ ಅಪಾಯ ತರಲಿರುವ ಮರಗಳನ್ನು ಕಡಿಯಬೇಕು ಎಂಬ ಬೇಡಿಕೆಯನ್ನು ನೀಡಲಾಯಿತು ಹಾಗೂ 15 ನೇ ಹಣಕಾಸು ಯೋಜನೆಯ ವರದಿ ಮಂಡನೆ ಮಾಡಲಾಯಿತು.

ಗ್ರಾಮ ಸಭೆಯ ಸಭಾಧ್ಯಕ್ಷತೆಯನ್ನು ಡಾ. ವಿಶ್ವನಾಥ ಸಿ .ಎನ್ ವಹಿಸಿದ್ದರು. ಗ್ರಾಮ ಸಭೆಯಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಸಾಮಾಜಿಕ ಪರಿಶೋಧನೆ ಬೆಳ್ತಂಗಡಿಯ ರಾಜೀವ್ ಸಾಲ್ಯಾನ್, ಉಜಿರೆ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಉಷಾ ಕಾರಂತ್, ಪಿಡಿಓ ಪ್ರಕಾಶ್ ಶೆಟ್ಟಿ, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


