Fri. Apr 11th, 2025

Uttar Pradesh Affair : ಪ್ರಿಯಕರನ ಜೊತೆ ಹೆಂಡತಿ ರೂಂನಲ್ಲಿದ್ದಾಗ ಮನೆಗೆ ಬಂದ ಗಂಡ – ಪ್ರಿಯಕರನ ಎದುರೇ ಗಂಡನಿಗೆ ಈಕೆ ಮಾಡಿದ್ದೇನು ಗೊತ್ತಾ?

ಉತ್ತರ ಪ್ರದೇಶ :(ಆ.31) ಪ್ರಿಯಕರನ ಜೊತೆ ಹೆಂಡತಿ ರೂಂನಲ್ಲಿದ್ದಾಗ ಗಂಡ ಮನೆಗೆ ಬಂದಿದ್ದಾನೆ. ಗಂಡ ಬಂದದ್ದನ್ನು ಅರಿತ ಪ್ರೇಮಿಗಳು ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ: 🛑ಉಡುಪಿ: 8 ಮದುವೆಯಾಗಿ ಎಲ್ಲರಿಗೂ ಪಂಗನಾಮ ಹಾಕಿದ ಉಡುಪಿ ಬ್ಯೂಟಿಕ್ವೀನ್.!!

ಘಜಿಯಾಬಾದ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಗೆ ಥಳಿಸಿದ್ದಾರೆ. ಆ ಮಹಿಳೆ ತನ್ನ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಆದರೆ, ಆಕೆಯ ಗಂಡ ಬೇಗನೇ ಮನೆಗೆ ಬಂದಿದ್ದ. ಮನೆಗೆ ಬಂದಾಗ ಆಕೆ ತನ್ನ ಪ್ರೇಮಿಯನ್ನು ಅಪ್ಪಿಕೊಂಡು ಇರುವುದನ್ನು ಕಂಡು ಗಂಡ ಕೋಪಗೊಂಡಿದ್ದ.

ಎಲ್ಲರ ಮುಂದೆ ತಾನೇ ತನ್ನ ಗಂಡನಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದಳು. ಇದೇ ವೇಳೆ ಮಹಿಳೆಯ ಪ್ರಿಯಕರ ಕೂಡ ಮಹಿಳೆಯ ಪತಿಗೆ ಒದ್ದು ಗುದ್ದಲು ಆರಂಭಿಸಿದ್ದಾನೆ. ಅಲ್ಲಿಗೆ ಬಂದ ಪೊಲೀಸರು ಗಲಾಟೆ ಹೆಚ್ಚುತ್ತಿರುವುದನ್ನು ಕಂಡು ಕೂಡಲೇ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಭೂಪೇಂದ್ರಪುರಿ ಕಾಲೋನಿಯಲ್ಲಿ ವಾಸವಾಗಿರುವ ಪತಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ಟಿಬ್ರಾ ರಸ್ತೆಯಲ್ಲಿ ವಾಸವಾಗಿರುವ ಅಮನ್‌ಕುಮಾರ್ ಎಂಬುವವರೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಹಲವು ಬಾರಿ ಜಗಳ ನಡೆದಿದೆ. ಇದನ್ನು ವಿರೋಧಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಗಂಡ ದೂರು ನೀಡಿದ್ದಾನೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು