Suicide case:(ಸೆ.2) ಇತ್ತೀಚಿಗೆ ಹದಿ ಹರೆಯದ ಮಕ್ಕಳ ಆತ್ಮಹತ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಇದೀಗ, ರಾಷ್ಟ್ರ ರಾಜಧಾನಿಯಲ್ಲಿ 16 ವರ್ಷದ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಆತ ಬರೆದ ಡೆತ್ ನೋಟ್ ಪೊಲೀಸ್ ಕೈ ಸೇರಿದ್ದು, ಇದೀಗ ವೈರಲ್ ಆಗಿದೆ.
ಇದನ್ನೂ ಓದಿ; 🔴ಬೆಳ್ತಂಗಡಿ: ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಬೆಳ್ತಂಗಡಿ ಅಧ್ಯಕ್ಷರಾಗಿ ರೋನಾಲ್ಡ್ ಲೋಬೊ
ಧೈರ್ಯ ಪ್ರತಾಪ್ ಸಿಂಗ್ ಕಂಜ್ವಾಲಾ ಪ್ರದೇಶದ ಕರಾಲಾ ಗ್ರಾಮದ ನಿವಾಸಿ. ದೆಹಲಿ ಆನಂದಪುರ್ ಧಾಮ್ ಪ್ರದೇಶದಲ್ಲಿರುವ ಶಾಲೆಯಲ್ಲಿ ಓದುತ್ತಿದ್ದ. ಧೈರ್ಯ ಪ್ರತಾಪ್ ಸಿಂಗ್ ರಾತ್ರಿ ಊಟ ಮುಗಿಸಿ ಮಲಗಲು ತೆರಳಿದ್ದಾನೆ. ಮರುದಿನ ಬೆಳಿಗ್ಗೆ ಧೈರ್ಯ ಎದ್ದು ಬರದ ಕಾರಣ ಮನೆಯವರು ಕಿಟಕಿಯಿಂದ ಇಣುಕಿ ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿ ಧೈರ್ಯ ಪ್ರತಾಪ್ ಶವ ಪತ್ತೆಯಾಗಿದೆ.
ವಿಚಿತ್ರ ಅಂದ್ರೆ ಅಪ್ಪ – ಅಮ್ಮನಿಗೆ ಪ್ರತ್ಯೇಕ ಡೆತ್ ನೋಟ್ ಬರೆದು ಇಟ್ಟಿರುವುದು. ಧೈರ್ಯ ಪ್ರತಾಪ್ ಸಿಂಗ್, ಆತ್ಮಹತ್ಯೆ ಮಾಡ್ಕೊಳ್ಳುವ ಮುನ್ನ ಅಪ್ಪ ಹಾಗೂ ಅಮ್ಮನಿಗೆ ಪ್ರತ್ಯೇಕವಾಗಿ ಡೆತ್ ನೋಟ್ ಬರೆದಿದ್ದಾನೆ.
ಅಮ್ಮನಿಗೆ ಬರೆದ ನೋಟ್ ನಲ್ಲಿ, ಇಷ್ಟು ದಿನ ನಿನಗೆ ಕಾಟ ನೀಡಿದ್ದಕ್ಕೆ ಕ್ಷಮೆ ಇರಲಿ. ಅನೇಕ ತಪ್ಪುಗಳನ್ನು ಮಾಡಿದ್ದೇನೆ. ನಾವಿಬ್ಬರು ಮತ್ತೆ ಭೇಟಿಯಾಗ್ತೇವೆ. ಈ ಜನ್ಮದಲ್ಲಿ ನಾನು ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯವಾಗ್ಲಿಲ್ಲ. ಇನ್ನು ತನ್ನ ತಂಗಿ ಮತ್ತು ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅಮ್ಮನಿಗೆ ಕೊನೆಯ ವಿನಂತಿ ಮಾಡಿದ್ದಾನೆ.
ಇನ್ನು ಅಪ್ಪನಿಗೆ ಬರೆದ ಡೆತ್ ನೋಟ್ ನಲ್ಲಿ, ತಂಗಿಗೆ ಹೆಚ್ಚು ವಿದ್ಯಾಭ್ಯಾಸ ನೀಡುವಂತೆ ಮನವಿ ಮಾಡಿದ್ದಾನೆ. ನಾನು ಕೇಳಿದ್ದನ್ನೆಲ್ಲ ಕೊಡಿಸಿದ್ದೀರಿ. ನನ್ನ ಎಲ್ಲ ಆಸೆಯನ್ನು ಈಡೇರಿಸಿದ್ದೀರಿ. ನನ್ನ ತಂಗಿ ಹಂಸಿತಾ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡ್ಬೇಡಿ. ಅವಳು ಹೇಳಿದಷ್ಟು ಕಲಿಸಿ. ನಾನು ನಿಮ್ಮಿಂದ ಇದನ್ನು ಕೊನೆಯದಾಗಿ ಕೇಳ್ತಿದ್ದೇನೆ ಎಂದು ಧೈರ್ಯ ಪತ್ರದಲ್ಲಿ ಬರೆದಿದ್ದಾನೆ.
ಧೈರ್ಯ ಪ್ರತಾಪ್ ಸಿಂಗ್ ಆತ್ಮಹತ್ಯೆ ಗೆ ಆತನ ಶಾಲೆ ಶಿಕ್ಷಕಿ ಕಾರಣ ಎಂದು ಹೆತ್ತವರು ದೂರು ನೀಡಿದ್ದು, ಇದಕ್ಕೆ ಕಾರಣ ಧೈರ್ಯ ಡೆತ್ ನೋಟ್ ನಲ್ಲಿ ಬರೆದ ವಿಷ್ಯ. ಸಾವಿಗೆ ಮುನ್ನ ತನ್ನ ಶಿಕ್ಷಕಿ ಸುನೀತಾ ಪಾಸಿ ಹೆಸರು ಬರೆದಿರುವ ಧೈರ್ಯ ಪ್ರತಾಪ್ ಸಿಂಗ್, ಈ ದಿನ ನಿಮಗೆ ತುಂಬಾ ಒಳ್ಳೆಯ ದಿನವಾಗಲಿದೆ. ನಿಮ್ಮ ದೊಡ್ಡ ಟೆನ್ಷನ್ ದೂರ ಮಾಡ್ತಿದ್ದೇನೆ ಎಂದು ಬರೆದಿದ್ದಾನೆ. ಇದೀಗ ಬಾಲಕನ ಸಾವಿಗೆ ನಿಜವಾದ ಕಾರಣ ಏನು ಎನ್ನುವುದು ಪೊಲೀಸ್ ವಿಚಾರಣೆ ನಂತರ ತಿಳಿದು ಬರಬೇಕಿದೆ.