Mon. Apr 7th, 2025

Tumkur: ಹೆತ್ತ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ – ಮಗಳನ್ನೇ ಗರ್ಭಿಣಿಯನ್ನಾಗಿಸಿದ ಪಾಪಿ ತಂದೆ

Tumkur:(ಸೆ.4) ತಂದೆ- ಮಗಳ ಸಂಬಂಧ ಅಂದ್ರೆ ಅದೊಂದು ನಿಷ್ಕಲ್ಮಶವಾದ ಪ್ರೀತಿ ಅಂತಾನೇ ಹೇಳ್ಬೋದು. ತಂದೆ ಅಂದ್ರೆ ಮಗಳಿಗೆ ಜೀವ , ಹಾಗೆ ಮಗಳೆಂದ್ರೆ ತಂದೆಗೂ ಅಷ್ಟೇ ಪ್ರೀತಿ, ಕಾಳಜಿ.

ಇದನ್ನೂ ಓದಿ: 🔴Sasikanth Senthil: ಹೆಂಡತಿ ಹೇಳಿದ ಆ ಒಂದೇ ಒಂದು ಮಾತಿಗೆ ರಾಜೀನಾಮೆ ನೀಡಿದೆ

ಈಗಿನ ಕಾಲದಲ್ಲಿ ತಂದೆ ಮಗಳ ಪ್ರೀತಿಗೆ ಬೆಲೆಯೇ ಇಲ್ಲದಂತಾಗಿದೆ. ತಂದೆಯೇ ಮಗಳ ಮೇಲೆ ಎರಗಿ ಅತ್ಯಾಚಾರ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಎಲ್ರೂ ಹಾಗೇ ಇರ್ತಾರೆ ಅಂತ ಹೇಳಲ್ಲ , ಆದರೆ ಕೆಲವೊಬ್ಬರ ಮನಸ್ಥಿತಿ ಹಾಗೆ ಇರುತ್ತೆ. ಅಂತಹದ್ದೇ ಒಂದು ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ.

ತಂದೆಯಿಂದಲೇ ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿಯೊಬ್ಬಳು ಇದೀಗ ಗರ್ಭ ಧರಿಸಿದ ಘಟನೆಯೊಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. 14 ವರ್ಷದ ಬಾಲೆಯ ಮೇಲೆ ಕಾಮುಕ ತಂದೆ ತನ್ನ ಕಾಮದಾಹವನ್ನು ತೀರಿಸಿಕೊಂಡಿದ್ದಾನೆ.

ಇವರು ಉತ್ತರ ಪ್ರದೇಶ ಮೂಲದವರು ಎನ್ನಲಾಗಿದ್ದು, ಎಂಟು ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಹೊರ ರಾಜ್ಯದಿಂದ ಬಂದಿತ್ತು.

ಪಾಪಿ ತಂದೆಯ ಮೇಲೆ ಫೋಕ್ಸೋ ಪ್ರಕರಣ ಹಾಗೂ ಅತ್ಯಾಚಾರ ಪ್ರಕರಣದ ಅಡಿ ಕೇಸು ದಾಖಲಾಗಿದೆ. ಬಾಲಕಿ ಇದೀಗ ಮೂರು ತಿಂಗಳ ಗರ್ಭಿಣಿ. ಹೊನ್ನವಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *