ಬೆಳಾಲು: (ಸೆ.5)ಬೆಳಾಲಿನ ಪಿನಾರಿ ಎಂಬಲ್ಲಿ ನಡೆದ ಬೈಕ್ ಅಪಘಾತದಲ್ಲಿ ಬೆಳಾಲು ಗ್ರಾಮದ ಜಲಕ್ಕಾರು ನಿವಾಸಿ ಶೀನಪ್ಪ ಗೌಡ(65) ರವರು ಚಿಕಿತ್ಸೆ ಫಲಿಸದೆ ಸೆ.5 ರಂದು ಸಾವನ್ನಪ್ಪಿದ್ದಾರೆ.

ಶೀನಪ್ಪ ಎಂಬವರು ಸೆ.4 ರಂದು ಸಂಜೆ ಬೆಳಾಲಿನ ಹಾಲಿನ ಡೈರಿ ಗೆ ಹಾಲು ಹಾಕಿ ವಾಪಸು ಮನೆಗೆ ಬರುವ ವೇಳೆಗೆ ಪಿನಾರಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದರು.





ಇವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

