Sat. Dec 14th, 2024

Mangalore: ವಿಶ್ವ ಸೌಂದರ್ಯ ಸ್ಪರ್ಧೆಗೆ ಕರಾವಳಿಯ ಇಬ್ಬರು ವೈದ್ಯೆಯರು ಆಯ್ಕೆ

ಮಂಗಳೂರು:(ಸೆ.6) ವಿಶ್ವ ಸೌಂದರ್ಯ ಸ್ಪರ್ಧೆಯಲ್ಲಿ ಕರಾವಳಿಯ ಬೆಡಗಿಯರ ಸ್ಪರ್ಧೆ ಸಾಮಾನ್ಯ. ಐಶ್ವರ್ಯ ರೈ ಯಿಂದ ಆರಂಭಿಸಿ ಕರಾವಳಿ ಮೂಲದ ಹಲವು ಚೆಲುವೆಯರು ವಿಶ್ವ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ. ಆದರೆ ಮಿಸೆಸ್ ವಿಭಾಗದಲ್ಲಿ ಮಂಗಳೂರಿನಿಂದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗಿಯಾದವರು ಇಲ್ಲ. ಇದೀಗ ಕರಾವಳಿ ಮೂಲದ ಇಬ್ಬರು ಅಂತರಾಷ್ಟ್ರೀಯ ಸೌಂದರ್ಯ‌ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: 🟣ಉಡುಪಿ: ಉಡುಪಿ ಜಿಲ್ಲಾ ಸಮಾವೇಶ 2024 ಮತ್ತು 26ನೇ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಜಾಗೃತಿ ಶಿಬಿರ

ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಫ್ಯಾಷನ್‌ ಶೋ ಆಗಸ್ಟ್ 29ರಿಂದ 3 ದಿನಗಳ ಕಾಲ ನಡೆದಿತ್ತು.ಈ ಸ್ಪರ್ಧೆಯಲ್ಲಿ ಕರಾವಳಿ ಮೂಲದ ಇಬ್ಬರು‌ ಕಿರೀಟ ಮುಡಿಗೇರಿಸಿ ಅಂತರಾಷ್ಟ್ರೀಯ ಸೌಂದರ್ಯ‌ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇಂಡಿಪೆಂಡೆಂಟ್ ಇಂಡಿಯಾ ಇಂಟರ್ ನ್ಯಾಷನಲ್ ನಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮತ್ತು ಅರ್ಥ್ ಇಂಡಿಯಾ ಇಂಟರ್ ನ್ಯಾಷನಲ್ ನಲ್ಲಿ ಡಾ ಶ್ರುತಿ ಬಲ್ಲಾಳ್ ವಿಜೇತರಾಗಿ ಕಿರೀಟ ಮುಡಿಗೇರಿಸಿದ್ದಾರೆ.

ರಾಜ್ಯದ ನಾನಾ ಭಾಗಗಳಿಂದ ಸುಮಾರು 35 ಸ್ಪರ್ಧಿಗಳು ಈ ಫ್ಯಾಷನ್‌ ಶೋ ನಲ್ಲಿ ಪಾಲ್ಗೊಂಡಿದ್ದರು. 3 ದಿನಗಳ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಅಲ್ಲದೇ ಸ್ಪರ್ಧಿಗಳು ಲಗೋರಿ, ಖೋ ಖೋ ಮತ್ತು ಗಿಲ್ಲಿದಾಂಡಿನಂತಹ ಸಾಂಪ್ರದಾಯಿಕ ಭಾರತೀಯ ಆಟಗಳಲ್ಲಿ ತೊಡಗಿಸಿಕೊಂಡು, ತಮ್ಮ ಕ್ರೀಡಾ ಮನೋಭಾವ ಪ್ರದರ್ಶಿಸಿದರು.

ಈ‌ ಇಬ್ಬರು ಸ್ಪರ್ಧಿಗಳು ಮಂಗಳೂರಿನಲ್ಲಿ‌ ಪಾಥ್ ವೇ ಎಂಟರ್ ಪ್ರೈಸಸ್ ಮತ್ತು ಮರ್ಸಿ ಬ್ಯೂಟಿ ಅಕಾಡೆಮಿ ಆಯೋಜಿಸಿದ್ದ ಮಿಸೆಸ್ ಇಂಡಿಯಾ ಕರ್ನಾಟಕ

ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದ ನಿಶಿತ ಶೆಟ್ಟಿಯಾನ್ ಫೆರ್ನಾಂಡೀಸ್ ಎರಡು ಮಕ್ಕಳ ತಾಯಿ. ವೃತ್ತಿಯಲ್ಲಿ ಹೆರಿಗೆ ತಜ್ಞೆ ವೈದ್ಯೆ. ವೈದ್ಯರಾಗಿದ್ದರೂ ಮಾಡೆಲಿಂಗ್ ನತ್ತ ಆಕರ್ಷಿತರಾದವರು. ಮಂಗಳೂರಿನಲ್ಲಿ ನಡೆದ ಮೊದಲ ವೈದ್ಯರ ಫ್ಯಾಷನ್ ಶೋ ನಲ್ಲಿ ನಿಶಿತ ಶೆಟ್ಟಿಯಾಮ್ ಫೆರ್ನಾಂಡಿಸ್ ಅವರು ವಿಜೇತರಾಗಿದ್ದರು. ಆ ಬಳಿಕ ನಿರಂತರ ಶ್ರಮದಿಂದ ಇದೀಗ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದ ಡಾ. ಶೃತಿ ಬಲ್ಲಾಳ್​ ಕೂಡ ಎರಡು ಮಕ್ಕಳ ತಾಯಿ. ವೃತ್ತಿಯಲ್ಲಿ ಇವರು ಕೂಡ ವೈದ್ಯರು. ಉಡುಪಿಯಲ್ಲಿ ಮಧುಮೇಹ ತಜ್ಞೆ. ಮದುವೆಯಾಗಿ ಎಂಟು ವರ್ಷವಾಗಿದೆ. ಇವರ ಪೂರ್ತಿ ಕುಟುಂಬ ವೈದ್ಯ ಕುಟುಂಬ. ಮದುವೆಯಾಗಿ ಬಂದದ್ದು ವೈದ್ಯ ಕುಟುಂಬಕ್ಕೆ. ಇವರು ಮಾಡೆಲಿಂಗ್ ನತ್ತ ಆಕರ್ಷಿರಾಗಿ ಇದೀಗ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಸ್ಪರ್ಧೆಯು ಫಿಲಿಫೈನ್ಸ್ ನಲ್ಲಿ ನಡೆಯುವ ಸ್ಪರ್ಧೆಗೆ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಆಯ್ಕೆಯಾಗಿದ್ದಾರೆ.ಈ ಸ್ಪರ್ಧೆ ನವೆಂಬರ್ ನಲ್ಲಿ ನಡೆಯಲಿದೆ. ಅರ್ಥ್ ಇಂಟರ್ ನ್ಯಾಷನಲ್ ಸ್ಪರ್ಧೆಯು ಡಿಸೆಂಬರ್ ನಲ್ಲಿ ಫಿಲಿಫೈನ್ಸ್ ನಲ್ಲಿ ನಡೆಯಲಿದ್ದು , ಈ ಸ್ಪರ್ಧೆಯಲ್ಲಿ ಭಾಗವಹಿಸಲು ಡಾ ಶೃತಿ ಬಲ್ಲಾಳ್ ಆಯ್ಕೆಯಾಗಿದ್ದಾರೆ. ಶೃತಿ ಬಲ್ಲಾಳ್ ಅವರು ಮಿಸೆಸ್ ಇಂಡಿಯಾ ಅರ್ಥ್ ಇಂಟರ್ ನ್ಯಾಶನಲ್, ಮಿಸೆಸ್ ಇಂಡಿಯಾ ಕರ್ನಾಟಕ ವಿವಾಸಿಯಸ್, ಮಿಸೆಸ್ ಇಂಡಿಯಾ ಕರ್ನಾಟಕ ಇನೊವೇಟಿವ್ ಫರ್ಪಾಮರ್ ವಿಜೇತರಾಗಿದ್ದಾರೆ.

ಈ ಸ್ಪರ್ಧೆಗೆ ಆಯ್ಕೆಯಾದ ಬಗ್ಗೆ ಮಾತನಾಡಿದ ಡಾ ಶೃತಿ ಬಲ್ಲಾಳ್ ಅವರು ನಾನು ವೈದ್ಯಕೀಯ ಪರಿವಾರದಿಂದ ಬಂದವಳು. ನನಗೆ ಸಣ್ಣ ವಯಸ್ಸಿನಿಂದಲೂ ಫ್ಯಾಷನ್ ಲೋಕಕ್ಕೆ ಬರಬೇಕೆಂದು ಆಸೆಯಿತ್ತು. ಆದರೆ ಮನೆಯಲ್ಲಿ ಮದುವೆಯಾದ ಬಳಿಕ‌ ಅಲ್ಲಿ ಸಪೋರ್ಟ್ ಸಿಕ್ಕಿದರೆ ಏನು ಬೇಕಾದರೂ ಮಾಡಿ ಎಂದರು. ಇದೀಗ ಗಂಡ, ಗಂಡನ ಮನೆಯವರು, ತಂದೆ ತಾಯಿ ಸಪೋರ್ಟ್ ನಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಪ್ರತಿಭೆ, ನಡಿಗೆ, ಮಾತು ಇಲ್ಲಿ ಮುಖ್ಯ.ಇದೀಗ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು ಎನ್ನುತ್ತಾರೆ.

ಈ ಸ್ಪರ್ಧೆಗೆ ಆಯ್ಕೆಯಾದ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮಾತನಾಡಿ ” ಇದೀಗ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿ ದೇಶವನ್ನು ಪ್ರತಿನಿಧಿಸುತ್ತಿರುವುದು ಖುಷಿ ತಂದಿದೆ. ವೈದ್ಯೆಯಾಗಿ ಸಮಯ ಸಿಗುವುದು ತುಂಬಾ ಕಷ್ಟ. ವೈದ್ಯೆಯಾಗಿ ರೋಗಿಗಳನ್ನು ನೋಡುವುದು, ಮನೆಗೆ ಹೋದ ಬಳಿಕ ಮಕ್ಕಳ ವಿದ್ಯಾಭ್ಯಾಸದ ಗಮನ ಕೊಡುವುದು ಆಗುತ್ತದೆ. ಮಾಡೆಲಿಂಗ್ ನ್ನು ತಡ ರಾತ್ರಿಯಲ್ಲಿ ಅಭ್ಯಾಸ ಮಾಡಲಾಯಿತು ಎನ್ನುತ್ತಾರೆ.

ಪಾಥ್ ವೆ ಎಂಟರ್ ಪ್ರೈಸಸ್ ನ ದೀಪಕ್ ಗಂಗೂಲಿ ಮಾತನಾಡಿ ನಾವು ಐದು ವರ್ಷದಿಂದ ಮಿಸೆಸ್ ಇಂಡಿಯಾ ಮಂಗಳೂರು ಸ್ಪರ್ಧೆ ಮಾಡುತ್ತಿದ್ದೇವೆ. ಈ ವರ್ಷ ಮೊದಲ ಬಾರಿಗೆ ಮಂಗಳೂರಿನಿಂದ ಆಯ್ಕೆಯಾದ ಇಬ್ಬರು ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಮತ್ತು ಮಿಸೆಸ್ ಇಂಡಿಯಾ ಅರ್ಥ್ ಎಂಬ ಎರಡು ಕಿರೀಟಗಳನ್ನು ಇಡಲಾಗಿತ್ತು. ಇದರಲ್ಲಿ ಇಬ್ಬರು ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇಬ್ಬರು‌ ವೈದ್ಯರು ಮಾಡೆಲಿಂಗ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ವಿಜೇತರಾದ ಈ ಇಬ್ಬರು ವೈದ್ಯರು ಸ್ಪರ್ಧೆಯಲ್ಲಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು ಮತ್ತು ಇವರು ವೈದ್ಯರೆಂದು ತಿಳಿದು ಹೆಚ್ಚಿನವರಿಗೆ ಅಚ್ಚರಿಯಾಗಿತ್ತು. ಇವರ‌ ಸಾಧನೆ ಶ್ಲಾಘನೀಯ ಎಂದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು