ಬೆಳಗಾವಿ:(ಸೆ.8) ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಸರ್ಕಾರಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ನಡೆದಿದೆ.
ಇದನ್ನೂ ಓದಿ: 🛑ರಸ್ತೆ ಬದಿಯಲ್ಲಿ ಯುವತಿಯ ಅತ್ಯಾಚಾರ- ತಡೆಯುವ ಬದಲು ಅಲ್ಲೆ ನಿಂತು ವಿಡಿಯೋ ಮಾಡಿದ ದಾರಿಹೋಕರು!
ಸುನೀಲ್ ಬಂಡರಗರ್ (10) ಮೃತ ಬಾಲಕ. ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆ ಗೆಳೆಯರ ಜೊತೆಗೆ ಹೊರ ಬಂದಿದ್ದಾಗ ಅವಘಡ ಸಂಭವಿಸಿದೆ.
ಮಕ್ಕಳು ನಿಂತಿದ್ದನ್ನ ಗಮನಿಸಿದರೂ ಚಾಲಕ ಮಕ್ಕಳ ಮೇಲೆ ಬಸ್ ಹರಿಸಿದ್ದಾನೆ. ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಥಣಿಯಿಂದ ಕಾರವಾರದ ಕಡೆ ಸರ್ಕಾರಿ ಬಸ್ ಹೋಗುತಿತ್ತು. ಭೀಕರ ರಸ್ತೆ ಅಪಘಾತ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.