Tue. Dec 3rd, 2024

Dharwad: ಪ್ರೇಮ‌ ವೈಫಲ್ಯ ಹಿನ್ನೆಲೆ ಯುವಕ ವಿಷ ಸೇವಿಸಿ ಆತ್ಮಹತ್ಯೆ

ಧಾರವಾಡ(ಸೆ.08): ಪ್ರೇಮ‌ ವೈಫಲ್ಯ ಹಿನ್ನೆಲೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ರೈಲ್ವೆ ನಿಲ್ದಾಣ ಬಳಿಯ ಶ್ರೀನಿವಾಸ್ ಲಾಡ್ಜ್​​ನಲ್ಲಿ‌ ನಡೆದಿದೆ.

ಇದನ್ನೂ ಓದಿ: 🛑ಬೆಂಗಳೂರು: ಅಂಗಡಿಗೆ ಹೋದ ಮಹಿಳೆಯನ್ನು ಅಪಹರಿಸಲು ಯತ್ನ

ಚಿಕ್ಕಮಗಳೂರು ಜಿಲ್ಲೆಯ ಸಿಗೆಹಡ್ಲು ಕಾಮನಕೆರೆ ನಿವಾಸಿ ಚಿನ್ಮಯ್ ಎಸ್.ಜಿ, ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸೆ.04 ರಂದು ಶ್ರೀನಿವಾಸ್ ಲಾಡ್ಜ್​ನ ರೂಮ್ ನಂ. 212 ರಲ್ಲಿ ತಂಗಿದ್ದ. ಸೆ. 6 ರಂದು ಸಂಜೆ ರೂಮ್ ಕ್ಲೀನ್ ಮಾಡಲು ಲಾಡ್ಜ್ ಸಿಬ್ಬಂದಿ ಹೋಗಿದ್ದ ವೇಳೆ ರೂಮ್ ಒಳಗಿನಿಂದ ಲಾಕ್ ಆಗಿತ್ತು.

ಈ ಹಿನ್ನಲೆ ಮಾರನೇ ದಿನ(ಸೆ. 7) ರಾತ್ರಿ ಲಾಡ್ಜ್ ಸಿಬ್ಬಂದಿ ಮತ್ತೆ ರೂಮ್ ಬಾಗಿಲು ತಟ್ಟಿದ್ದಾನೆ. ಆದರೂ ಚಿನ್ಮಯ್ ಬಾಗಿಲು ತೆರೆಯದ ಹಿನ್ನಲೆ ಅನುಮಾನಗೊಂಡು ಮತ್ತೊಂದು ಬೀಗ ಬಳಸಿ ಲಾಕ್ ಓಪನ್ ಮಾಡಿದ್ದಾರೆ.

ಬಾಗಿಲು ತೆಗೆದಾಗ ಯುವಕ ಚಿನ್ಮಯ್​​ ಶವವಾಗಿ ಬಿದ್ದಿದ್ದ. ಕೂಡಲೇ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *