ಗಂಡಿಬಾಗಿಲು:(ಸೆ.9) ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲು ಇಲ್ಲಿ ಸೆ.08 ರಂದು ಮಾತೆ ಮರಿಯಮ್ಮನವರ ಹುಟ್ಟುಹಬ್ಬವನ್ನು ಸಿಯೋನ್ ಆಶ್ರಮದ ನಿವಾಸಿಗಳೊಂದಿಗೆ ಆಚರಿಸಲಾಯಿತು.
ಇದನ್ನೂ ಓದಿ: ⛔Ghost Hackers: ಡಿಜಿಟಲ್ ಅರೆಸ್ಟ್ ಆಯ್ತು – ಈಗ Ghost ಹ್ಯಾಕರ್ಸ್- ಏನಿದು Ghost ಹ್ಯಾಕರ್ಸ್..?
ಮಧ್ಯಾಹ್ನದ ವಿವಿಧ ಬಗೆಯ ಆಹಾರ ಖಾದ್ಯಗಳ ಭೋಜನ ವ್ಯವಸ್ಥೆಯನ್ನು KCWA ಕುವೈಟ್, ಜೆರಿ ಡಿ’ಸೋಜ ಮತ್ತು ಕುಟುಂಬಸ್ಥರು ಅಬುದಾಬಿ, ಲ್ಯಾನ್ಸಿ ಸೆಬಾಸ್ಟಿನ್ ಮೆಂಡೆನ್ನಾ ಕುವೈಟ್ ಮತ್ತು ಉದಾರ ದಾನಿಗಳು ನೀಡಿದರು.
ಸಿಯೋನ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀಯುತ ಯು.ಸಿ.ಪೌಲೋಸ್‌ರವರು, ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.