ಕಾರ್ಕಳ:(ಸೆ.9) ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: 😱ಉತ್ತರಪ್ರದೇಶ: ಆಸ್ಪತ್ರೆಯ ಬಿಲ್ ಕಟ್ಟಲಾಗದೇ ತನ್ನ ಮೂರು ವರ್ಷದ ಕಂದಮ್ಮನನ್ನೇ ಮಾರಿದ ಅಪ್ಪ
ಜಯಶ್ರೀ ಎಸ್ ಮಾನೆ, ಪೊಲೀಸ್ ನಿರೀಕ್ಷಕರು ಪ್ರಭಾರ, ಕಾರ್ಕಳ ನಗರ ಠಾಣೆ ಇವರಿಗೆ ದೊರೆತ ಮಾಹಿತಿಯಂತೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಅವಿನಾಶ್ ಕಂಪೌಂಡ್
ಬಳಿ ಇರುವ ಪ್ರಮೀಳಾ ವಿಜಯ್ ಕುಮಾರ್ ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಸ್ಥಳಕ್ಕೆ ದಾಳಿ ನಡೆಸಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮನೆಯಲ್ಲಿ ಇದ್ದ ಭರತ್ ಎಂಬಾತನನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಓರ್ವ ಸಂತ್ರಸ್ತೆ ಮಹಿಳೆಯನ್ನು ರಕ್ಷಿಸಿದ್ದು, ಆಪಾದಿತರಾದ ಭರತ್ ಕುಮಾರ್, ಮನೆಯ ಮಾಲೀಕರಾದ ಪ್ರಮೀಳಾ ವಿಜಯ್ ಕುಮಾರ್ ಇವರುಗಳು ಸೇರಿ ಮಹಿಳೆಯ ದುರ್ವ್ಯಾಪಾರ ನಡೆಸಿ
ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮ ಲಾಭ ಪಡೆದ ಆರೋಪದ ಕುರಿತು ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 153/2024 ಕಲಂ: 144(2) ಜೊತೆಗೆ 3(5) BNS 2023 , ಕಲಂ: 3,4,5,6 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿರುತ್ತದೆ.