Sat. Dec 7th, 2024

Rambutan Fruit: ರಂಬುಟಾನ್ ಹಣ್ಣು ಗಂಟಲಿಗೆ ಸಿಲುಕಿ ಬಾಲಕಿ ಮೃತ್ಯು

Rambutan Fruit: (ಸೆ.10) ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಿನಲ್ಲಿ ಸಿಲುಕಿ 6 ವರ್ಷದ ಬಾಲಕಿ ಮೃತಪಟ್ಟ ಘಟನೆ ಕೇರಳದ ಪೆರುಂಬವೂರಿನಲ್ಲಿ ಸಂಭವಿಸಿದೆ.

ಇದನ್ನೂ ಓದಿ: ⛔Soundarya: ಆ ಒಬ್ಬ ವ್ಯಕ್ತಿಗೆ ಮಾತ್ರ ಗೊತ್ತಿತ್ತಂತೆ ನಟಿ ಸೌಂದರ್ಯ ಸಾವಿನ ರಹಸ್ಯ – ಆತ ಯಾರು ಗೊತ್ತಾ?

ಕೇರಳದ ಪೆರುಂಬವೂರಿನ ಕಂಡಂತರ ಚಿರಾಯತುವೀಟ್ ನಲ್ಲಿ ಮನ್ಸೂರ್ ಅವರ ಪುತ್ರಿ ನೂರಾ ಫಾತಿಮಾ (6) ಮೃತ ಬಾಲಕಿಯಾಗಿದ್ದಾಳೆ.

ಯು.ಕೆ.ಜಿ. ವಿದ್ಯಾರ್ಥಿನಿಯಾಗಿರುವ ನೂರ್ ಫಾತಿಮಾ ಭಾನುವಾರ ಸಂಜೆ ಮನೆಯಲ್ಲಿ ಇತರ ಮಕ್ಕಳೊಂದಿಗೆ ರಂಬುಟಾನ್ ತಿನ್ನುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಗಂಟಲಲ್ಲಿ ರಂಬುಟನ್ ಹಣ್ಣಿನ ಬೀಜ ಸಿಲುಕಿದ್ದ ಕಾರಣ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಳು.

Leave a Reply

Your email address will not be published. Required fields are marked *