Wed. Apr 16th, 2025

Bengaluru : ಯಾರೂ ಇಲ್ಲದಿದ್ದಾಗ ಬಾಯ್‌ ಫ್ರೆಂಡ್ ಜೊತೆ ಮಲಗಿದ್ದ ಮಗಳು – ತಾಯಿ ಪ್ರಶ್ನಿಸಿದ್ದಕ್ಕೆ ಮಗಳು ಮಾಡಿದ್ದೇನು ಗೊತ್ತಾ??

ಬೆಂಗಳೂರು :(ಸೆ.14) ತಾಯಿ ಮಗಳ ಸಂಬಂಧ ಅನ್ನೋದು ಮಮತೆ, ಪ್ರೀತಿಯಿಂದ ಕೂಡಿರುವಂತಹದ್ದು. ತಾಯಿ ಮಗಳ ಮಧ್ಯೆ ಜಗಳಗಳು , ಮನಸ್ಥಾಪಗಳು ನಡೆಯೋದು ಸಹಜ.

ಇದನ್ನೂ ಓದಿ: ⭕ಬೆಳ್ತಂಗಡಿ : ವಿದ್ಯಾರ್ಥಿಗೆ ಬೆತ್ತದಿಂದ ಹಲ್ಲೆ

ಅದು ಸ್ವಲ್ಪ ಸಮಯವಷ್ಟೇ ಇರೋದು ,ಆಮೇಲೆ ಮುನಿಸು ಮರೆತುಹೋಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಒಂದು ಭಯಾನಕ ಕೃತ್ಯ ನಡೆದಿದೆ.

ಹೆತ್ತ ತಾಯಿಯನ್ನೇ ತನ್ನ ಪ್ರಿಯಕರನಿಗೋಸ್ಕರ ಹತ್ಯೆಗೈದ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.

ಜಯಲಕ್ಷ್ಮೀ ಮೃತ ತಾಯಿ. ಪವಿತ್ರಾ ಎಂಬಾಕೆ ತನ್ನ ಸ್ನೇಹಿತ ನವನೀಶ್ ಎಂಬುವವನ ಜೊತೆ ಸೇರಿ ತಾಯಿಯ ಜೀವವನ್ನೇ ತೆಗೆದು ಹಾಕಿದ್ದಾಳೆ.

ಏನಿದು ಘಟನೆ?
ಪವಿತ್ರಾ ಹಾಗೂ ನವನೀಶ್‌ ಇಬ್ಬರೂ ಪ್ರೀತಿಸುತ್ತಿದ್ದರು. ಆದ್ರೆ ಈ ವಿಷಯ ಪವಿತ್ರಾಳ ತಾಯಿಗೆ ತಿಳಿದಿರಲಿಲ್ಲ. ಪವಿತ್ರಾ ತಾಯಿ ಇಲ್ಲದಿದ್ದಾಗ ತನ್ನ ಬಾಯ್‌ ಫ್ರೆಂಡ್‌ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ.

ತಾಯಿ ಮನೆಗೆ ಬರುವುದಿಲ್ಲ ಎಂದು ತಿಳಿದುಕೊಂಡು ಈಕೆ ಪ್ರಿಯಕರ ಜೊತೆಯಲ್ಲಿ ಏಕಾಂತದಲ್ಲಿದ್ದಳು. ತಕ್ಷಣ ಮನೆಗೆ ಬಂದ ತಾಯಿ ಇವರಿಬ್ಬರು ಒಟ್ಟಿಗೆ ಮಲಗಿದ್ದನ್ನು ಕಂಡು ಶಾಕ್‌ ಆಗಿ, ಪ್ರಶ್ನಿಸಿದ್ದಾಳೆ.

ಇನ್ನೇನು ತಾಯಿಗೆ ಎಲ್ಲಾ ಗೊತ್ತಾಯ್ತು ಅಂತ ಅರಿತ ಪವಿತ್ರಾ ಹಾಗೂ ನವನೀಶ್‌ ಸೇರಿ ತಾಯಿಯನ್ನು ಕತ್ತು ಹಿಸುಕಿ ಕೊಲೆಗೈದಿದ್ದಾರೆ.

Leave a Reply

Your email address will not be published. Required fields are marked *