Mon. Feb 17th, 2025

husband – wife: ಚಿಕನ್​ನಲ್ಲಿ ಉಪ್ಪು ಕಡಿಮೆ ಎಂದ ಗಂಡ – ಹೆಂಡತಿ ಮಾಡಿದ್ದೇನು ಗೊತ್ತಾ?

ಬಿಹಾರ:(ಸೆ.24) ಗಂಡ – ಹೆಂಡತಿ ಜಗಳ ಉಂಡು ಮಲಗುವ ತನಕ ಅಂತ ಹೇಳ್ತಾರೆ. ಚಿಕ್ಕ ಚಿಕ್ಕ ವಿಷಯಕ್ಕೂ ಗಂಡ ಹೆಂಡತಿ ಜಗಳ ಮಾಡೋದು ಸಹಜ.

ಇದನ್ನೂ ಓದಿ: ⛔ಮಂಗಳೂರು: ಕಾರಿನ ಚಕ್ರದಲ್ಲಿ ಬೆಂಕಿ ಬರುತ್ತಿದೆ ಎಂದು ಹೇಳುವ ಖದೀಮರು

ಚಿಕನ್​ ಸಾಂಬಾರ್​​ನಲ್ಲಿ ಉಪ್ಪು ಕಡಿಮೆ ಇದೆ ಅಂತ ಹೇಳಿದ್ದಕ್ಕೆ ಗಂಡನಿಗೆ ಕಬ್ಬಿಣದ ರಾಡ್​ನಿಂದ ಹೊಡೆದು ಹೆಂಡತಿ ಕೊಲೆ ಮಾಡಿದ್ದಾಳೆ. ಬಿಹಾರದ ಚಂಪಾರಣ್ ಜಿಲ್ಲೆಯ ಚೌತರ್ವದ ಕೊಲ್ಹುವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೊಲ್ಹುವಾ ಗ್ರಾಮದ ಶಂಶೇರ್ ಆಲಂ ಅಲಿಯಾಸ್ ಲಾಲು (35) ಮೃತ ದುರ್ದೈವಿ. ಪತ್ನಿ ಶಹನಾಜ್ ಬೇಗಂ ಹಾಗೂ ಈಕೆ ಸಹೋದರಿ ಅಪ್ರಾಪ್ತೆಯನ್ನ ಪೊಲೀಸರು ಬಂಧಿಸಿದ್ದಾರೆ.

ಮನೆಯಲ್ಲಿ ಯಾವಾಗಲೂ ಮಾಡುವಂತೆ ಹೆಂಡತಿ ಚಿಕನ್ ಸಾಂಬಾರ್ ಮಾಡಿದ್ದಳು. ಮನೆಗೆ ಬಂದ ಗಂಡ ಚಿಕನ್ ಊಟ ಮಾಡುತ್ತ ಚಿಕನ್​ಗೆ ಉಪ್ಪು ಜಾಸ್ತಿ ಆಗಿದೆ. ನೋಡಿಕೊಂಡು ಚಿಕನ್ ಮಾಡೋಕೆ ಬರಲ್ವಾ ಎಂದು ಪ್ರಶ್ನೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಇದೇ ಮಾತಿಗೆ ಕೋಪಗೊಂಡ ಹೆಂಡತಿ ಮನೆಯಲ್ಲಿದ್ದ ರಾಡ್​ ತೆಗೆದುಕೊಂಡು ಗಂಡನಿಗೆ ಮನಬಂದಂತೆ ಹೊಡೆದಿದ್ದಾಳೆ. ಹೆಂಡತಿ ಹೊಡೆಯುವಾಗ ಅಪ್ರಾಪ್ತ ಸಹೋದರಿ ಕೂಡ ಕೋಲು ಹಿಡಿದುಕೊಂಡು ಬಂದು ಮಾವನಿಗೆ ಹೊಡೆದಿದ್ದಾಳೆ.

ಆದರೆ ರಾಡ್​ನಿಂದ ಬಲವಾದ ಪೆಟ್ಟು ಬಿದ್ದಿದ್ದರಿಂದ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾನೆ. ಕೂಗಾಟ, ಅರಚಾಟ ಕೇಳಿ ಪಕ್ಕದ ಮನೆಯವರು ಬಂದು ನೋಡುವಷ್ಟರಲ್ಲಿ ಗಂಡನನ್ನ ಹತ್ಯೆ ಮಾಡಿದ್ದಳು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತನ ಹೆಂಡತಿ ಹಾಗೂ ಅಪ್ರಾಪ್ತೆಯನ್ನು ಅರೆಸ್ಟ್ ಮಾಡಿ ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ಶಂಶೇರ್ ಆಲಂ ಗುಜರಾತ್​ನಲ್ಲಿ ಕೆಲಸ ಮಾಡುತ್ತಿದ್ದನು. ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದನು ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು