Sat. Dec 14th, 2024

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಶಿವ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 23 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:53 ರಿಂದ ಮಧ್ಯಾಹ್ನ 12:23, ಯಮಘಂಡ ಕಾಲ ಮಧ್ಯಾಹ್ನ 03:24ರಿಂದ ಸಂಜೆ 04:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ 09:23 ರ ವರೆಗೆ.

ಮೇಷ ರಾಶಿ : ಇಂದು ನಿಮಗೆ ಶುಭ ಸೂಚನೆಯು ಸಿಗಲಿದ್ದು ಅದೇ ಪ್ರಕಾರವಾಗಿ ನೀವು ಮುನ್ನಡೆಯುವಿರಿ. ನಿಮಗೆ ಸಾಧ್ಯವಿರುವ ಕಾರ್ಯಗಳನ್ನು ಮಾತ್ರ ಮಾಡಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ಮಾಡುವಿರಿ. ನಿಮ್ಮ ಯಶಸ್ಸು ನಿಮಗೆ ಮುಳುವಾಗಬಹುದು.

ವೃಷಭ ರಾಶಿ : ನ್ಯಾಯಸಮ್ಮತವಾದ ದಾರಿಯಲ್ಲಿ ಇದ್ದರೂ ನಿಮಗೆ ನೋವು ತಪ್ಪದು. ಇಂದು ನಿಮ್ಮ ಬಗ್ಗೆ ತಿಳಿಯದೇ ಸುಮ್ಮನೇ ಕುಖ್ಯಾತಿ ಬರುವುದು. ಆಸ್ತಿಯ ವಿಚಾರಕ್ಕೆ ಕುಟುಂಬದಲ್ಲಿ ಪರಸ್ಪರ ಜಗಳವಾಗುವ ಸಾಧ್ಯತೆ ಇದೆ. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಮಾಡುವುದು ಉತ್ತಮ. ಕಡಿಮೆ ಖರ್ಚಿನಲ್ಲಿ ನಿಮ್ಮ ಕೆಲಸವು ಮುಗಿಯುವಂತೆ ನೋಡಿಕೊಳ್ಳುವಿರಿ.

ಮಿಥುನ ರಾಶಿ : ಯಾರನ್ನಾದರೂ ಹಿಡಿದುಕೊಂಡು ನಿಮಗೆ ಆಗಬೇಕಾದ ಕೆಲಸವನ್ನು ಮಾಡುವಿರಿ.ನಿಮಗೆ ನಿಮ್ಮವರ ಮಾತಿನಿಂದ ಇರುಸು ಮುರುಸಾದೀತು. ರಾಜಕೀಯ ವ್ಯಕ್ತಿಗಳಿಂದ ಕೆಲಸವಾಗಲು ಅವರಿಗೆ ಹಣವನ್ನು ಕೊಡುವಿರಿ. ಸ್ನೇಹಿತ ಸಹವಾಸದಿಂದ ದುರಭ್ಯಾಸವನ್ನು ಕಲಿಯುವ ಸಾಧ್ಯತೆ ಇದೆ. ಎಲ್ಲರ ಎದುರು ನಿಮ್ಮ ಆತುರವನ್ನು ತೋರಿಸುವುದು ಬೇಡ. ನಿಮ್ಮ ಯೋಜನೆಗಳು ಹೆಚ್ಚು ಇಷ್ಟವಾಗಲಿದೆ.

ಕರ್ಕಾಟಕ ರಾಶಿ : ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಹಾಕಬಹುದು. ಇಂದು ಸಾಲಬಾಧೆಯು ನಿಮಗೆ ಅತಿಯಾದಂತೆ ಭಾಸವಾಗುವುದು. ದೂರದ ಬಂಧುಗಳ ಭೇಟಿಯಾಗಲಿದೆ. ಅವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ನಡವಳಿಕೆಯು ಅಹಂಕಾರದಂತೆ ತೋರೀತು.

ಸಿಂಹ ರಾಶಿ : ಸಾಲವನ್ನು ತೀರಿಸಲು ನಿಮ್ಮ ಯೋಜನೆ ಕಾರ್ಯರೂಪಕ್ಕೆ ಬರುವುದು. ಇಂದು ಉದ್ಯೋಗವನ್ನು ಅರಸುತ್ತ ಇದ್ದರೆ ಇಂದು ಉತ್ತಮ ಉದ್ಯೋಗವು ಸುಳಿವು ಸಿಗಲಿದೆ. ಸ್ವಂತ ಆರೋಗ್ಯದ ಸುಧಾರಣೆಗೆ ಖರ್ಚು ಮಾಡುವಿರಿ. ಅಸಭ್ಯ ಮಾತುಗಳು ನಿಮಗೆ ಶೋಭೆಯನ್ನು ತರದು. ಎಲ್ಲರ ಜೊತೆ ಬೆರೆತು ಮಾತನಾಡುವುದನ್ನು ಇಷ್ಟಪಡುವಿರಿ. ಯಾರ ಹೊಣೆಕಾರಿಕೆಯಲ್ಲಿಯೂ ನಿಮ್ಮ ಕಾರ್ಯವನ್ನು ಬಿಡುವುದು ಬೇಡ.

ಕನ್ಯಾ ರಾಶಿ : ಸಂಘರ್ಷಗಳಿಗೆ ಸುಖಾಂತ್ಯವನ್ನು ಮಾಡಿದ್ದರೆ ಮತ್ತೇನಾದರೂ ಆದೀತು. ಇಂದು ಹಲವಾರು ದಿನಗಳ ವಾಹನ ಖರೀದಿಯ ಆಸೆಯು ಪೂರ್ಣಗೊಳ್ಳುವುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದವರಿಗೆ ಸಂಕಷ್ಟ ಬರಬಹುದು. ಭೂಮಿಯನ್ನು ವಿಸ್ತರಿಸುವ ಯೋಜನೆ ಮಾಡುವಿರಿ.

ತುಲಾ ರಾಶಿ : ಇಂದಿನ ಕೆಲವು ಘಟನೆಗಳನ್ನು ಪ್ರತಿಕೂಲವಾಗಿ ತೆಗೆದುಕೊಂಡರೆ ಕಷ್ಟ. ಇಂದು ನಿಮಗೆ ಕಾರ್ಯದಿಂದ ತೃಪ್ತಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಆತಂಕ ಇರಲಿದೆ. ಪರೀಕ್ಷೆಯ ಭಯವು ನಿಮ್ಮ ಅಧ್ಯಯನ ದಿಕ್ಕನ್ನೇ ತಪ್ಪಿಸಬಹುದು.

ವೃಶ್ಚಿಕ ರಾಶಿ : ಇಂದು ನಿಮ್ಮ ಬಲವಂತದ ಪ್ರೇಮ ತಪ್ಪಿಹೋಗುವುದು. ಉದ್ಯೋಗದ ಸ್ಥಳವು ನಿಮಗೆ ಖುಷಿಯ ಸ್ಥಾನವಾಗಲಿದೆ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡಲಿದ್ದೀರಿ. ಆರ್ಥಿಕತೆಯ ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯನ್ನು ನೀವು ಇಷ್ಟಪಡಲಾರಿರಿ. ಸಂಗಾತಿಯಿಂದ ಹೊಗಳಿಕೆಯನ್ನು ಪಡೆಯುವಿರಿ. ಹೊರಗಿನ ವಸ್ತುವನ್ನು ಹೆಚ್ಚು ಸೇವಿಸುವಿರಿ.

ಧನು ರಾಶಿ : ಸಾಮಾಜಿಕ ಕಾರ್ಯದಲ್ಲಿ ತೊಡಗುವುದಷ್ಟೇ ಅಲ್ಲ, ಆರ್ಥಿಕ ಸಹಾಯವನ್ನೂ ನೀವು ಮಾಡಬೇಕಾಗುವುದು. ಇಂದು ವಿದ್ಯಾರ್ಥಿಗಳಿಗೆ ತಾಯಿಯಿಂದ ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವರು. ಗಂಡಾಂತರದಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಮನೆಗೆ ಬೇಕಾದ ಉಪಕರಣಗಳನ್ನು ಖರೀದಿಸುವಿರಿ.

ಮಕರ ರಾಶಿ : ಕುಟುಂಬದಲ್ಲಿ ಸಲ್ಲದ ಮಾತುಗಳು ಬರಬಹುದು. ಅದನ್ನು ತೆಗೆದುಕೊಂಡು ಹೋಗುವುದು ನಿಮ್ಮದೇ ಕಾರ್ಯವಾಗಬಹುದು. ಇಂದು ನೀವು ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಹೊಸ ಉದ್ಯಮವನ್ನು ಆರಂಭಿಸಲು ಧೈರ್ಯವು ಸಾಲದು. ಇನ್ನೊಬ್ಬರ ಜೊತೆ ಸೇರಿ ಮುಂದುವರಿಸುವುದು ನಿಮ್ಮ ಉತ್ತಮ ಆಯ್ಕೆ ಆಗಬಹುದು.

ಕುಂಭ ರಾಶಿ : ನಿಮ್ಮ ಕಾರ್ಯದ ಅನುಭವದ ಮೇಲೆ ಉತ್ತಮ ಸ್ಥಾನವು ಪ್ರಾಪ್ತವಾಗುವುದು. ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ನೋವನ್ನು ನುಂಗಿ ಬದುಕುವ ಕಲೆಯನ್ನು ನೀವು ಅರ್ಥಮಾಡಿಕೊಂಡಿರುವಿರಿ. ಸ್ವಂತ ಉದ್ಯಮವನ್ನು ನಡೆಸುವವರು ಪ್ರಸಾರದ ಕಡೆಗೆ ಗಮನ ಕೊಡುವಿರಿ.‌ ಯಾರನ್ನೂ ನೋಯಿಸುವುದು ನಿಮಗೆ ಇಷ್ಟವಾಗದು.

ಮೀನ ರಾಶಿ : ನಿಮ್ಮ ಉದ್ಯಮಕ್ಕೆ ಮನೆಯಿಂದ ಪ್ರೋತ್ಸಾಹ ಸಹಾಯಗಳು ಸಿಗದಿದ್ದರೂ ಬಂಧುಗಳಿಂದ ಸಿಗುವುದು. ಇಂದು ನಿಮಗೆ ಎಲ್ಲ ಕಾರ್ಯದಲ್ಲಿಯೂ ಉತ್ಸಾಹವು ಕಡಿಮೆ ಇರುವುದು. ನಿಮ್ಮ ಚರ ಸಂಪತ್ತನ್ನು ಜೋಪಾನ ಮಾಡಿಕೊಳ್ಳಿ. ಸ್ನೇಹಿತರಿಂದ ಲಾಭವು ನಿಮಗೆ ಸಿಗಲಿದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಆರಾಮಾಗಿ ಇರಲು ಹೆಚ್ಚು ಇಷ್ಟಪಡುವಿರಿ. ಅತಿಯಾದ ಆಯಾಸವನ್ನು ಮಾಡಿಕೊಳ್ಳಲು ಹೋಗುವುದು ಬೇಡ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು