Fri. Apr 11th, 2025

Belthangadi: ಖ್ಯಾತ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಗಣಪತಿ ಕಲಾವಿದ ಗಣೇಶ್ ಗುಂಪಲಾಜೆಗೆ ಗಣಪತಿ ರಚನೆಯಲ್ಲಿ ಪ್ರಥಮ ಸ್ಥಾನ

ಬೆಳ್ತಂಗಡಿ ಸೆ.28: (ಯು ಪ್ಲಸ್‌ ಟಿವಿ ): ರಾಷ್ಟ್ರ ಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಳ್ತಂಗಡಿ ಕಲಾವಿದ ಗಣೇಶ್ ಗುಂಪಲಾಜೆಯವರು

ಇದನ್ನೂ ಓದಿ: 🟠ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ವಿಶೇಷ ಸಭೆ

ಈ ಬಾರಿ ರಚನೆ ಮಾಡಿರುವ ಬೆಳ್ತಂಗಡಿಯ ಸಾರ್ವಜನಿಕ ಗಣೇಶೋತ್ಸವದ ಮಹಾಗಣಪತಿಗೆ ಪ್ರಥಮ ಸ್ಥಾನ ಲಭಿಸಿದೆ.

ಪ್ರತೀ ವರುಷವೂ ಸಾಮಾಜಿಕ ಜಾಲತಾಣದ ಮೂಲಕ ದ.ಕ, ಉಡುಪಿ, ಕಾಸರಗೋಡು ವಲಯಗಳನ್ನು ಒಳಗೊಂಡ ಅಂದದ ಗಣಪ ಸ್ಪರ್ಧೆಯನ್ನು

ಆಯೋಜನೆ ಮಾಡಿಕೊಂಡು ಬರುತ್ತಿರುವ “ಗಣಪತಿ ಕರ್ನಾಟಕ” ಎಂಬ ವೇದಿಕೆಯ ವತಿಯಿಂದ ಖ್ಯಾತ ಕಲಾವಿದ ಗಣೇಶ್ ಅವರು ಗಣಪತಿ ರಚನೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ನೂರಾರು ಗಣಪತಿ ವಿಗ್ರಹಗಳನ್ನು ಪರಿಶೀಲಿಸಲಾಗಿತ್ತು. ಆದ್ರೆ ಆ ಎಲ್ಲ ವಿಗ್ರಹಗಳ ಮಧ್ಯೆ ಗಣೇಶ್‌ ಗುಂಪಲಾಜೆಗೆ ಪ್ರಥಮ ಸ್ಥಾನ ಲಭಿಸಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು