ಪುತ್ತೂರು :(ಸೆ.28) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಯದ್ವಾ ತದ್ವಾ ಮಗುಚಿ ಬಿದ್ದ ಘಟನೆ ಕೆಮ್ಮಾರ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ⭕ಮಸೀದಿ ಎದುರು “ಭಾರತ್ ಮಾತಾ ಕೀ ಜೈ” ಘೋಷಣೆ ಅಪರಾಧವಲ್ಲ ಎಂದ ಹೈಕೋರ್ಟ್!!
ಕಡಬ ಕಡೆಯಿಂದ ಕೆಮ್ಮಾರ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ಅಡ್ಡಲಾಗಿ ಬಿದ್ದ ಕಾರನ್ನು ಕೂಡಲೇ ಸ್ಥಳೀಯರು ಸೇರಿಕೊಂಡು ಮೇಲಕ್ಕೆತ್ತಿ ಸರಿ ಮಾಡಿ ನಿಲ್ಲಿಸಿದ್ದಾರೆ.


ಬಸ್ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದ್ದು, ಅಷ್ಟರಲ್ಲಾಗಲೇ ಬಸ್ ಬಂದು ಹೋಗಿದ್ದರಿಂದ ಅಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ.
ಇದರಿಂದ ಸಂಭವನೀಯ ಅವಘಡವೊಂದು ತಪ್ಪಿದಂತಾಗಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.


ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯು ಹಳೆಗೇಟು- ಕೊಯಿಲದವರೆಗೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ-ಗುಂಡಿಗಳಿಂದ ಕೂಡಿದೆ.

ಹಲವು ಬಾರಿ ಈ ಬಗ್ಗೆ ಮನವಿ ಮಾಡಿದರೂ ಲೋಕೋಪಯೋಗಿ ಇಲಾಖೆ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ವ್ಯಕ್ತವಾಗಿದೆ.
