Fri. Apr 11th, 2025

Karkala: ಕಾರ್ಕಳದಲ್ಲೊಂದು ಹೃದಯ ವಿದ್ರಾವಕ ಘಟನೆ- ಬೈಕ್ ಮತ್ತು ಮಿನಿಲಾರಿ ನಡುವೆ ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ಸಾವು!

ಕಾರ್ಕಳ :(ಸೆ.30) ನಲ್ಲೂರು ಪಾಜೆಗುಡ್ಡೆ ಬಳಿ ಬೈಕ್ ಮತ್ತು ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿದ್ದ 5 ಜನರಲ್ಲಿ ಮೂರು ಮಕ್ಕಳನ್ನು ಸೇರಿ, 4 ಮಂದಿ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: 🟣ಉಜಿರೆ: ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಕಿಂಡರ್ಗಾರ್ಟನ್ ವಿಭಾಗದಲ್ಲಿ “ಜಂಗಲ್ ಜಂಬೂರಿ” ಕಾರ್ಯಕ್ರಮ


ಬೈಕ್ ನಲ್ಲಿ ಪತಿ, ಪತ್ನಿ ಹಾಗೂ 3 ಮಕ್ಕಳು ಬರುತ್ತಿದ್ದಾಗ ಪಾಜೇಗುಡ್ಡೆ ಬಳಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.


ಬೈಕ್ ನಲ್ಲಿ ಸುರೇಶ್ ಆಚಾರ್ಯ (36) ಮೀನಾಕ್ಷಿ (32) ಸುಮಿಕ್ಷಾ ಮಗಳು (7), ಸುಶ್ಮಿತಾ (5) ಸುಶಾಂತ್ (2) ಸವಾರರಿದ್ದು, ಮಹಿಳೆಯನ್ನು ಹೊರತುಪಡಿಸಿ ಉಳಿದೆಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೃತರು ವೇಣೂರು ಗಾಂಧಿನಗರದವರು ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು