ಕಾರ್ಕಳ: (ಅ.1) ಕಾರ್ಕಳದಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಈಚರ್ ಚಾಲಕ ಹೇಮಂತ್ ನನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 🛑Belthangady: ಮನೆಗೆ ಸಿಡಿಲು ಬಡಿದು ಭಾರೀ ಹಾನಿ
ನಿನ್ನೆ ಮಧ್ಯಾಹ್ನ 5.50 ರಿಂದ 6 ಗಂಟೆಯ ಸಮಯದಲ್ಲಿ ಒಂದು ಈಚರ್ ಲಾರಿ ಬಜಗೋಳಿ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಿಸುತ್ತಿದ್ದು, ವೇಣೂರು ಕಡೆಯಿಂದ ಡಿಸ್ಕವರಿ ಮೋಟಾರು ಸೈಕಲ್ ಮೂಲಕ ನಲ್ಲೂರಿಗೆ 5 ಮಂದಿ ತೆರಳುತ್ತಿದ್ದರು.
ಬೈಕನ್ನು ಸುರೇಶ್ ಆಚಾರ್ಯ(35) ಇವರು ಚಲಾಯಿಸುತ್ತಿದ್ದರು. ಅದರಲ್ಲಿ ಅವರ ಪತ್ನಿ ಮೀನಾಕ್ಷಿ (32), ಸುಮೀಕ್ಷಾ (7), ಸುಶ್ಮಿತಾ(5) ಸುಶಾಂತ್(2) ಇವರನ್ನು ಕುಳ್ಳಿರಿಸಿಕೊಂಡು
ಹೋಗುವಾಗ ಪಾಜೆಗುಡ್ಡೆ ತಿರುವಿನಲ್ಲಿ ಈಚರ್ ಲಾರಿಯ ಚಾಲಕ ಅತೀ ವೇಗ ಹಾಗೂ ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕರಾದ ಸುರೇಶ್, ಸುಮೀಕ್ಷಾ, ಸುಶಾಂತ್ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಸುಶ್ಮಿತಾ ಹಾಗೂ ಮೀನಾಕ್ಷಿ ರವರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ಸಾಗಿಸಿದ್ದು, ಅದರಲ್ಲಿ ಸುಶ್ಮಿತಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ಮೀನಾಕ್ಷಿಯವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಈಚರ್ ಚಾಲಕ ಹೇಮಂತ್ ನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.