Sun. Mar 23rd, 2025

Guripalla: ಯುವವಾಹಿನಿ ಡೆನ್ನಾನ ಡೆನ್ನಾನ – 2024 ಆಮಂತ್ರಣ ಪತ್ರಿಕೆ ಬಿಡುಗಡೆ

ಗುರಿಪಳ್ಳ:(ಅ.7) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ.) ಬೆಳ್ತಂಗಡಿ

ಇದನ್ನೂ ಓದಿ: 🛑ಬಿಗ್‌ ಬಾಸ್‌ ಗೆ ವಕೀಲರ ಸಂಘದಿಂದ ಖಡಕ್‌ ಎಚ್ಚರಿಕೆ

ಇದರ ಸಹಯೋಗದೊಂದಿಗೆ ಡಿಸೆಂಬರ್ 01 ರಂದು ನಡೆಯಲಿರುವ ಡೆನ್ನಾನ ಡೆನ್ನನ 2024 ಯುವವಾಹಿನಿ ಅಂತರ್’ಘಟಕ ಸಾಂಸ್ಕೃತಿಕ ಸ್ಪರ್ದೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗುರಿಪಳ್ಳದಲ್ಲಿ ಬಿಡುಗಡೆಗೊಳಿಸಲಾಯಿತು.

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಗುರಿಪಳ್ಳದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷರಾದ ಜಯ ವಿಕ್ರಮ ಕಲ್ಲಾಪು ಮಾತನಾಡಿ , ಬಿಲ್ಲವ ಸಂಘಟನೆ ಗ್ರಾಮ ಮಟ್ಟದಲ್ಲೂ ಸದೃಢವಾಗಬೇಕೆಂದರು.

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸದಾಶಿವ ಊರ ಮಾತನಾಡಿ ಡೆನ್ನಾನ ಡೆನ್ನನ ಸಾಂಸ್ಕೃತಿಕ ಸ್ಪರ್ಧೆಗೆ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಅಧ್ಯಕ್ಷರಾದ ಎಂ. ಕೆ ಪ್ರಸಾದ್, ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಕಾರ್ಯದರ್ಶಿ ನಿತೀಶ್ ಹೆಚ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.


ವೇದಿಕೆಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯ ನಿರ್ದೇಶಕರಾದ ಜಯ ಕುಮಾರ್ ನಡ, ಚಂದ್ರಶೇಖರ ಇಂದಬೆಟ್ಟು, ಮಹಿಳಾ ಬಿಲ್ಲವ ವೇದಿಕೆ ಗುರಿಪಳ್ಳದ ಕಾರ್ಯದರ್ಶಿ ದೇವಕಿ ಉಪಸ್ಥಿತರಿದ್ದರು. ಸಭೆಯಲ್ಲಿ ಬ್ರಹ್ಮಶ್ರೀ ಸ್ವ- ಸಹಾಯ ಸಂಘ ಕೊಡೆಕ್ಕಲ್ ಹಾಗೂ ಗುರಿಪಳ್ಳದ ಸದಸ್ಯರು, ಕನ್ಯಾಡಿ ಹಾಗೂ ಉಜಿರೆ ಗ್ರಾಮದ ಎಲ್ಲಾ ಸಮಾಜ ಬಾಂಧವರು ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡಿದರು,

ಆಗಮಿಸಿದ ಎಲ್ಲರಿಗೂ ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ಯುವವಾಹಿನಿ ಸಂಚಾಲನ ಸಮಿತಿ ಗುರಿಪಳ್ಳ ಅಧ್ಯಕ್ಷ ಜಯರಾಮ್ ಪೂಜಾರಿ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.

Guripalla: Yuvavahini Dennana Dennana – 2024 invitation letter released

Leave a Reply

Your email address will not be published. Required fields are marked *