Wed. Nov 20th, 2024

Puttur: ಹುಲಿಗೊಬ್ಬು ಕಾರ್ಯಕ್ರಮದಲ್ಲಿ ಗಮನಸೆಳೆದ ಸ್ವಚ್ಛತೆ

ಪುತ್ತೂರು :(ಅ.8) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಎರಡನೇ ಬಾರಿಗೆ ಹುಲಿಗೊಬ್ಬು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹುಲಿವೇಷಗಳ ಕುಣಿತ ಸ್ಪರ್ಧೆಯ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರೇಕ್ಷಕರಿಗಾಗಿ ಫುಡ್‌ ಫೆಸ್ಟ್‌ ಅನ್ನು ಕೂಡಾ ಆಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ:💥ವೇದಿಕೆಯಲ್ಲಿ ದೈವಕ್ಕೆ ಅವಮಾನ

ಇಂತಹ ಕಾರ್ಯಕ್ರಮಗಳಿಗೆ ಸಹಜವಾಗಿಯೇ ಸಾವಿರಾರು ಜನ ಸೇರುತ್ತಾರೆ. ಹಾಗಾಗಿ ಇಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಲ್ಲಲ್ಲಿ ಕಾಣಸಿಗುವ ಕಸವನ್ನು ಹೆಕ್ಕಿ, ಆ ಕಸವನ್ನು ತೋರಿಸಿ ಬಹುಮಾನ ಪಡೆಯಿರಿ ಎಂದು ಕಾರ್ಯಕ್ರಮದ ಆಯೋಜಕರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಈ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆಯನ್ನು ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಹೀಗೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸ್ವಚ್ಛತೆಯ ದೃಷ್ಟಿಯಿಂದ ಕಸದ ಬುಟ್ಟಿಗಳನ್ನು ಇಟ್ಟರೂ ಕೂಡಾ ಅಲ್ಲಲ್ಲಿ ಕಸ ಕಡ್ಡಿಗಳು ಕಾಣಸಿಗುತ್ತಲೇ ಇರುತ್ತವೆ.

ಹೀಗಿರುವಾಗ ಈ ಕಾರ್ಯಕ್ರಮದಲ್ಲಿ ಸ್ವಚ್ಛತೆಯ ವಿಷಯವಾಗಿ ಒಂದು ಸಣ್ಣ ತಪ್ಪು ಕೂಡಾ ನಡೆಯಬಾರದು ಎಂದು ಅಲ್ಲಲ್ಲಿ ಕಾಣಸಿಗುವ ಕಸವನ್ನು ಹೆಕ್ಕಿ, ಆ ಕಸವನ್ನು ತೋರಿಸಿ ಬಹುಮಾನ ಪಡೆಯಿರಿ ಎಂದು ಕಾರ್ಯಕ್ರಮದ ಆಯೋಜಕರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸ್ವಚ್ಛತೆಯ ಈ ವಿನೂತನ ಪ್ರಯತ್ನಕ್ಕೆ ಭಾರೀ ಪ್ರಶಂಸೆಯೂ ದೊರೆತಿದೆ.

ಸ್ವಚ್ಛತಾ ಸಿಬ್ಬಂದಿಗಳು ಮಾರ್ಗದಲ್ಲಿ ಮತ್ತು ಆಹಾರ ಮಳಿಗೆಗಳ ಸುತ್ತಮುತ್ತ ಕೆಳಗೆ ಬಿದ್ದಂತಹ ಸಣ್ಣ ಸಣ್ಣ ಕಸ ಕಡ್ಡಿಗಳನ್ನು ಕೂಡಾ ಹೆಕ್ಕಿ ಬುಟ್ಟಿಗೆ ಹಾಕುವ ಹಾಗೂ ಕಸದ ಬುಟ್ಟಿಯಲ್ಲಿ ಕಸ ತುಂಬಿ ತುಳುಕದಂತೆ ಮುಂಜಾಗೃತೆ ವಹಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಿರತರಾಗಿರುವ ದೃಶ್ಯ ಕಾರ್ಯಕ್ರಮ ನಡೆಯುವ ಪ್ರದೇಶದ ಸುತ್ತಲೂ ಕಂಡು ಬರುತ್ತಿತ್ತು.

ಹುಲಿಗೊಬ್ಬು ಕಾರ್ಯಕ್ರಮದಲ್ಲಿ ಈ ರೀತಿ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು, ಈ ವಿಡಿಯೋಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Cleanliness highlighted in Tiger Manure programme

Leave a Reply

Your email address will not be published. Required fields are marked *