ಉಜಿರೆ (ಅ.11): ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಅ. 4ರಂದು ಸಾಮಾಜಿಕ ಜಾಲತಾಣಗಳು ಕುರಿತು “ಮಾತು ಮಂಥನ” ಚರ್ಚಾಕೂಟ ನಡೆಯಿತು.

ಇದನ್ನೂ ಓದಿ: 🟣ವಿಶ್ವ ಮಾನಸಿಕ ಆರೋಗ್ಯ ದಿನ
ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಆಗುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳ ಬಗ್ಗೆ ಚರ್ಚೆ ನಡೆಯಿತು. ಸಾಮಾಜಿಕ ಜಾಲತಾಣಗಳಿಗೆ ಅಗತ್ಯವಾದ ನೆಟ್ವರ್ಕ್’ನಿಂದ ಪರಿಸರ ಹಾಗೂ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು ಹಾಗೂ ದೇಶದ ಬೆಳವಣಿಗೆ, ಉದ್ಯೋಗಾವಕಾಶ, ಕಲಿಕೆ ಮುಂತಾದವುಗಳಿಗೆ ಸಾಮಾಜಿಕ ಜಾಲತಾಣಗಳು ಪೂರಕವಾಗುವ ವಿಚಾರಗಳ ಬಗ್ಗೆ ಪ್ರಸ್ತಾಪವಾಯಿತು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಸಾಮಾಜಿಕ ಜಾಲತಾಣದಿಂದ ಹಲವಾರು ಜನರ ಜೀವನ ಅರಳಿದೆ. ಕೆಲವರ ಜೀವನ ನಾಶವಾಗಿದೆ. ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಬೇಕು ಎಂದು ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಧ್ಯಾಪಕರಾದ ಸೂರ್ಯನಾರಾಯಣ ಭಟ್, ಸುವೀರ್ ಜೈನ್, ಡಾ. ಪದ್ಮನಾಭ, ಡಾ. ಗೀತಾ ಹಾಗೂ ವಿದ್ಯಾರ್ಥಿಗಳಾದ ಮಾನಸ ಅಗ್ನಿಹೋತ್ರಿ, ಶರಣಪ್ಪ, ಚಿಂತನ ಮತ್ತು ರಂಗಸ್ವಾಮಿ ಚರ್ಚೆಯಲ್ಲಿ ಪಾಲ್ಗೊಂಡರು. ಕನ್ನಡ ಅಧ್ಯಾಪಕ ಡಾ. ದಿವಾಕರ ಕೊಕ್ಕಡ ಸಮನ್ವಯಕಾರರಾಗಿದ್ದರು.



ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹಾಗೂ ಐಕ್ಯುಎಸಿ ಅಧ್ಯಕ್ಷ ಪ್ರೊ. ಜಿ. ಆರ್. ಭಟ್ ವಂದಿಸಿದರು.
