Tue. Mar 25th, 2025

Raj B Shetty: ರಾಜ್‌ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಫ್ಯಾನ್ಸ್‌ ಫುಲ್‌ ಫಿದಾ!!

Raj B Shetty:(ಅ.12) ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಮಂಗಳೂರು ದಸರಾದಲ್ಲಿ ಹುಲಿ ಕುಣಿತ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಮಂಗಳೂರು ದಸರಾಕ್ಕೆ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರುಗಳು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: 🟣ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಶಿವಂ ದುಬೆ

ಮಂಗಳೂರು ದಸರಾ ಅದ್ದೂರಿಯಾಗಿ ನಡೆದಿದ್ದು, ನಿನ್ನೆ ಮಂಗಳೂರು ದಸರಾ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ರವರುಗಳು ಆಗಮಿಸಿದ್ದರು.

ಕರಾವಳಿಯ ಜನಪ್ರಿಯ ಕಲೆಗಳ ಪ್ರದರ್ಶನವನ್ನು ವೇದಿಕೆ ಮೇಲೆ ಮಾಡಲಾಯಿತು. ವೇದಿಕೆ ಮೇಲೆ ರಾಜ್ ಬಿ ಶೆಟ್ಟಿ ಹುಲಿ ಕುಣಿತ ಮಾಡಿ ರಂಜಿಸಿದರು.

ಆ ನಂತರ ಪ್ರಮೋದ್ ಶೆಟ್ಟಿ ಸಹ ವೇದಿಕೆ ಏರಿ ಇತರೆ ಕೆಲ ಅತಿಥಿಗಳೊಟ್ಟಿಗೆ ಡ್ಯಾನ್ಸ್ ಮಾಡಿ ರಂಜಿಸಿದರು. ಕಳೆದ ಬಾರಿಯೂ ಸಹ ರಾಜ್ ಬಿ ಶೆಟ್ಟಿ ಮಂಗಳೂರು ದಸರಾದಲ್ಲಿ ಹುಲಿ ಕುಣಿತ ಮಾಡಿದ್ದರು.

Leave a Reply

Your email address will not be published. Required fields are marked *