ಚಾರ್ಮಾಡಿ :(ಅ.14) ಚಾರ್ಮಾಡಿಯಲ್ಲಿ ಬೃಹದಾಕಾರದ ಕಾಳಿಂಗ ಸರ್ಪ ಪತ್ತೆಯಾಗಿರುವ ಘಟನೆ ನಡೆದಿದೆ. ಚಾರ್ಮಾಡಿ ಗ್ರಾಮದ ಕಲ್ಲಡ್ಕದ ಅಫೀಜ್ ಎನ್ನುವವರ ಮನೆಯ ಬಳಿ ಬೃಹದಾಕಾರದ ಕಾಳಿಂಗ ಸರ್ಪ ಪತ್ತೆಯಾಗಿತ್ತು.
ಇದನ್ನೂ ಓದಿ: 🟣ಮಡಂತ್ಯಾರಿನ ಭದ್ರಾ ಹೋಮ್ ಅಪ್ಲೈಯನ್ಸಸ್ ಮಳಿಗೆಯಲ್ಲಿ ಭರ್ಜರಿ ಹುಲಿ ಕುಣಿತ ಪ್ರದರ್ಶನ..!
ಕೂಡಲೇ ಮನೆ ಮಾಲೀಕ ಅಫೀಜ್, ಉರಗ ತಜ್ಞ ಅನಿಲ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅನಿಲ್ ಅವರು, ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಚಾರ್ಮಾಡಿ ಘಾಟ್ ನ ಕಾಡಿಗೆ ಬಿಟ್ಟಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮರಿ ಕಾಳಿಂಗವನ್ನು ತಿಂದು ತೇಗಿದ ಬೃಹತ್ ಕಾಳಿಂಗ ಸರ್ಪ..!
ಅಫೀಜ್ ಅವರ ಮನೆಯ ಹತ್ತಿರ ಇದ್ದ ದೊಡ್ಡ ಕಾಳಿಂಗ ಸಣ್ಣ ಕಾಳಿಂಗ ಸರ್ಪವನ್ನು ತಿಂದಿದೆ. ತಿಂದ ನಂತರ ದೊಡ್ಡ ಕಾಳಿಂಗ ಗದ್ದೆಗೆ ಹೋಗಿದೆ. ಗದ್ದೆಯಿಂದ ವಾಪಸ್ ಆಗುವ ವೇಳೆ ಕಾಳಿಂಗ ಸರ್ಪವನ್ನು ಅನಿಲ್ ಅವರು ಹಿಡಿದಿದ್ದಾರೆ. ಈಗ ಅಲ್ಲಿನ ಜನ ನಿಟ್ಟುಸಿರು ಬಿಡುವಂತೆ ಆಗಿದೆ.