Mon. Apr 7th, 2025

heart attack: ಹೃದಯವಿದ್ರಾವಕ ಘಟನೆ- ಹೃದಯಾಘಾತದಿಂದ 5 ವರ್ಷದ ಬಾಲಕಿ ಸಾವು!!

ತೆಲಂಗಾಣ:(ಅ.16) 5 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: 🟠Udupi: ಈಶ್ವರ್ ಮಲ್ಪೆಗೆ ನೆರವಾದ ಕೇರಳ ಸಂಸ್ಥೆ!

ಕರೀಂನಗರ ಜಿಲ್ಲೆಯ ಜಮ್ಮಿಕುಂಟಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ರಾಜು- ಜಮುನಾ ಅವರ ಪುತ್ರಿ ಉಕ್ಕುಲು (5) ಮಂಗಳವಾರ ಬೆಳಿಗ್ಗೆ ತೀವ್ರ ಅಸ್ವಸ್ಥಳಾಗಿದ್ದಳು, ಆಕೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಅಷ್ಟೊತ್ತಿಗಾಗಲೇ ಮಗು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.

ಆಕೆಗೆ ಹೃದಯ ಸಂಬಂಧಿ ಕಾಯಿಲೆ ಇರಬಹುದೆಂದು ಶಂಕಿಸಿದ್ದರು. ಒಬ್ಬಳೇ ಮಗಳು ತೀರಿ ಹೋಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *