Wed. Nov 20th, 2024

Guruvayanakere: ವಿದ್ವತ್ ಪಿಯು ಕಾಲೇಜಿನಲ್ಲಿ “ವಿಜ್ ವರ್ಲ್ಡ್ – 2024 ” ಸ್ಪರ್ಧೆ

ಗುರುವಾಯನಕೆರೆ: (ಅ.17) ವಿದ್ವತ್ ಪಿಯು ಕಾಲೇಜಿನಲ್ಲಿ “ವಿಜ್ ವರ್ಲ್ಡ್ – 2024 “ ಸ್ಪರ್ಧೆ ನಡೆಯಿತು.

ಇದನ್ನೂ ಓದಿ: ⭕ಪುತ್ತೂರು: ಮಹಿಳೆಯರ ಕಾಲಿನಡಿ ಹಾಕಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ

ಟಿವಿಯಲ್ಲಿ ಪ್ರಸ್ತುತ ಪಡಿಸುವ ಹಾಗೆಯೇ ಒಂದು ಗಂಟೆಯ ಸುದ್ದಿ ಪ್ರಸ್ತುತಪಡಿಸುವ ನೇರಪ್ರಸಾರದ ಸ್ಪರ್ಧೆ ಇದಾಗಿದ್ದು, ಸ್ಪರ್ಧೆಯಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ವಿದ್ವತ್ ಮೀಡಿಯಾ ವಾಹಿನಿ ಹಾಗೂ ವಿದ್ವತ್ ಟೈಮ್ಸ್ ವಾಹಿನಿಗಳಾಗಿ ಭಾಗವಹಿಸಿದ್ದರು.

ಈ ಒಂದು ಗಂಟೆಯ ಸುದ್ದಿ ಪ್ರಸ್ತುತ ಪಡಿಸುವ ಸ್ಪರ್ಧೆಯಲ್ಲಿ ಸುದ್ದಿನಿರೂಪಕರು, ವರದಿಗಾರರು, ಸುದ್ದಿ ವಿಶ್ಲೇಷಕರು, ಚರ್ಚೆ ನಡೆಸಿಕೊಡುವವರು ಹಾಗೂ ಚರ್ಚೆಯಲ್ಲಿ ಭಾಗವಹಿಸುವ ವಿಷಯ ತಜ್ಞರು ಸೇರಿ ಒಟ್ಟು 10 ವಿದ್ಯಾರ್ಥಿಗಳು ಪ್ರತೀ ತಂಡದಲ್ಲಿದ್ದರು.

ಡಿಜಿಟಲ್ ತಂತ್ರಜ್ಞಾನ ಬಳಸಿ, ಕಾಲೇಜಿನ ಡಿಜಿಟಲ್ ಬೋರ್ಡ್ನಲ್ಲಿ ಪ್ರಸ್ತುತ ಪಡಿಸಿದ ಈ ಪ್ರಸಾರ ಒಂದು ಟಿವಿ ಮಾಧ್ಯಮ ಒಂದು ಗಂಟೆಯ ನ್ಯೂಸ್ ನಲ್ಲಿ ಯಾವೆಲ್ಲಾ ಅಂಶಗಳನ್ನು ಹೊರತ್ತರುತ್ತದೆಯೋ ಆ ಎಲ್ಲಾ ಅಂಶಗಳನ್ನು ಒಳಗೊಂಡಿತ್ತು. ಒಂದು ಗಂಟೆಯ ಈ ಪ್ರಸ್ತುತಿ ಯಾವ ಪ್ರತಿಷ್ಠಿತ ಸುದ್ದಿ ವಾಹಿನಿಗೂ ಕೂಡ ಯಾವ ರೀತಿಯಲ್ಲೂ ಕಡಿಮೆಯಿರಲಿಲ್ಲ.

ನೆರೆದಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ ಈ ಕಾರ್ಯಕ್ರಮ ವ್ಯಕ್ತಿತ್ವ ವಿಕಸನಕ್ಕೆ ಹಿಡಿದ ಕನ್ನಡಿಯಂತಿತ್ತು. ಪ್ರತೀ ಸ್ಪರ್ಧಿಯು ಮಾತನಾಡುವ ಬಗೆ ಅವರ ಸ್ಪಷ್ಠತೆ, ವಿಷಯಮಂಡನೆ, ಮುಂತಾದವುಗಳ ಸಂಪೂರ್ಣ ತರಬೇತಿಯನ್ನ ಇನ್ಸ್ಫೈರ್ ವಿದ್ವತ್ ಪೋರಂ ವಹಿಸಿಕೊಂಡು ವೃತ್ತಿಪರತೆ ಹಾಗೂ ಸ್ಪರ್ಧಾತ್ಮಕ ಆಯಾಮ ನೀಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಈ “ವಿದ್ವತ್‌ ವಿಜ್ ವರ್ಲ್ಡ್ – 2024” ಒಂದು ರಚನಾತ್ಮಕ ಹಾಗೂ ಕ್ರಿಯಾಶೀಲ ಚಟುವಟಿಕೆಯಾಗಿದ್ದು, ವಿದ್ವತ್ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಬಹುದೊಡ್ಡ ವೇದಿಕೆಯಾಗಿದೆ ಎಂದು ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿಯವರು ಹೇಳಿದರು. ಸಂಸ್ಥೆಯ ಟ್ರಸ್ಟಿ ಎಂ.ಕೆ ಕಾಶಿನಾಥ್ ಹಾಗೂ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗಂಗಾಧರ ಇ ಮಂಡಗಳಲೆ ಹಾಗೂ ಪ್ರಾಂಶುಪಾಲರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *