Fri. Apr 11th, 2025

Aladangadi:(ಅ.29) ಅಳದಂಗಡಿ ಪ್ರಾ.ಕೃ.ಪ.ಸ.ಸಂಘದ ನವೀಕೃತಗೊಂಡ ಪೆರೋಡಿತ್ತಾಯಕಟ್ಟೆ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ ಬೃಹತ್‌ ರಕ್ತದಾನ ಶಿಬಿರ

ಅಳದಂಗಡಿ:(ಅ.27) ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ನವೀಕೃತಗೊಂಡ ಪೆರೋಡಿತ್ತಾಯಕಟ್ಟೆ ಶಾಖೆಯ ಉದ್ಘಾಟನಾ ಸಮಾರಂಭ ಮತ್ತು ಗ್ರಾಮ ಪಂಚಾಯತ್ ಬಳಂಜ, ಹಳೇ ವಿದ್ಯಾರ್ಥಿ ಸಂಘ ಪೆರೋಡಿತ್ತಾಯಕಟ್ಟೆ, ಮೀಡಿಯಾ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಅ. 29ರಂದು ಪೆರೋಡಿತ್ತಾಯಕಟ್ಟೆಯಲ್ಲಿ ನಡೆಯಲಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ: ಹೆಜ್ಜೇನು ದಾಳಿಯಿಂದ ಮಗುವನ್ನು ರಕ್ಷಿಸಿದ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸಿಬ್ಬಂದಿ

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರವರು ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಅಧ್ಯಕ್ಷ ರಾಕೇಶ್ ಹೆಗ್ಡೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಭಯ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್, ಎಸ್‌.ಡಿ.ಎಂ. ಮಲ್ಟಿ ಸ್ಪೆಷಾಲಿಟಿ, ಆಸ್ಪತ್ರೆ ಉಜಿರೆ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಜನಾರ್ಧನ, ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೋಭಾ ಕುಲಾಲ್,

ಪೆರೋಡಿತ್ತಾಯಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಅರ್ಕಕೀರ್ತಿ ಹೆಗ್ಡೆ, ಹಳೇ ವಿದ್ಯಾರ್ಥಿ ಸಂಘ / ಮೀಡಿಯಾ ಕ್ಲಬ್‌ ಬೆಳ್ತಂಗಡಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನೇಸರ, ವಿಠಲ ಹೆಗ್ಡೆ ಕಟ್ಟಡದ ಮಾಲಕರು, ಪೆರೋಡಿತ್ತಾಯಕಟ್ಟೆ ಬಳಂಜ ಗ್ರಾಮ ಪಂಚಾಯತ್ ಪಿ.ಡಿ.ಒ. ಗಣೇಶ್ ಶೆಟ್ಟಿ, ಪೆರೋಡಿತ್ತಾಯಕಟ್ಟೆ ಸ.ಉ. ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ಬೆನೆಡಿಕ್ಟ್ ಪಾಯಿಸ್, ಪೆರೋಡಿತ್ತಾಯಕಟ್ಟೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುಸ್ತಫಾ ಮಂಜೊಟ್ಟಿ ಭಾಗವಹಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ಎಸ್‌.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು