Tue. Apr 15th, 2025

Kalladka: ಕಲ್ಲಡ್ಕದ ಕೆ.ಟಿ ಹೋಟೆಲ್ ನಲ್ಲಿ ಕಳವು..! – 7 ನಿಮಿಷ ಕಳ್ಳ ಒಳಗೆ ಮಾಡಿದ್ದೇನು..?

ಕಲ್ಲಡ್ಕ:(ಅ.27) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಲ್ಲಡ್ಕ ಕೆ.ಟಿ ಹೋಟೆಲ್ ಗೆ ಕಳ್ಳನೊಬ್ಬ ಲಗ್ಗೆ ಇಟ್ಟಿದ್ದಾನೆ. ಹೆಲ್ಮೆಟ್ ಧರಿಸಿ ಬಂದರೂ ಕಳ್ಳನ ಮುಖ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿದೆ.

ಇದನ್ನೂ ಓದಿ: ◼Semicolon tattoos: ಟ್ರೆಂಡ್‌ ಆದ ಅರ್ಧವಿರಾಮ ಟ್ಯಾಟೂ!!

ಕಲ್ಲಡ್ಕದ ಶ್ರೀ ಲಕ್ಷ್ಮೀ ನಿವಾಸ ಕೆ.ಟಿ.ಹೋಟೆಲ್ ಗೆ ಶುಕ್ರವಾರ ಮುಂಜಾನೆ ಸುಮಾರು 2 ಗಂಟೆ ವೇಳೆ ಹೆಲ್ಮೆಟ್ ಧರಿಸಿ ಬಂಧ ಕಳ್ಳ ಟಾರ್ಚ್ ಬಳಸಿ, ಕ್ಯಾಶ್‍ಕೌಂಟರ್ ಸಹಿತ ಇತರ ಕಡೆಗಳಲ್ಲಿ ಜಾಲಾಡಿ ಬಳಿಕ ದೇವರ ಹುಂಡಿಯನ್ನು ಎತ್ತಾಕಿಕೊಂಡು ಹೋಗಿದ್ದಾನೆ.

ಕಳವಿನ ಬಗ್ಗೆ ಹೋಟೇಲು ಮಾಲೀಕರು ಪೋಲೀಸರಿಗೆ ಮಾಹಿತಿ ನೀಡಿದ್ದು, ಅಧಿಕೃತ ದೂರು ನೀಡಿಲ್ಲ ಎನ್ನಲಾಗಿದೆ. ದೇವರ ಡಬ್ಬಿಯಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ ಕಳ್ಳ ಇತರ ಕಡೆಗಳಲ್ಲಿ ಜಾಲಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸುಮಾರು 7 ನಿಮಿಷಗಳ ಕಾಲ ಹೋಟೆಲ್ ಒಳಗಡೆ ಆರಾಮವಾಗಿ ಕಳ್ಳ ಜಾಲಾಡಿರುವ ದೃಶ್ಯ ಸೆರೆಯಾಗಿದೆ. ಸಿಸಿ ಕ್ಯಾಮರಾ ಫೂಟೇಜ್ ಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *