Tue. Feb 11th, 2025

Belthangady: ಬಾರ್ಯದಲ್ಲಿ ಖಾಸಗಿ ಬ್ಯಾಂಕ್ ಎಟಿಎಂ ಒಡೆದು ದರೋಡೆಗೆ ಯತ್ನ!!

ಬೆಳ್ತಂಗಡಿ :(ಅ.29) ಎಸ್ ಬಿ ಎಂ ಎಂಬ ಖಾಸಗಿ ಬ್ಯಾಂಕಿನ ಎಟಿಎಂ ಒಡೆದು ಲಕ್ಷಾಂತರ ಹಣ ದೋಚಲು ವಿಫಲ ಯತ್ನ ನಡೆಸಿದ ಘಟನೆ ಸೋಮವಾರ ತಡ ರಾತ್ರಿ ಬಾರ್ಯ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: 🔴ಅಳದಂಗಡಿ : ಅಳದಂಗಡಿ ಪ್ರಾ.ಕೃ.ಪ. ಸಹಕಾರ ಸಂಘ ಪೆರೋಡಿತ್ತಾಯಕಟ್ಟೆ ಶಾಖೆಯ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಮೂರುಗೋಳಿ ಎಂಬಲ್ಲಿರುವ ಖಾಸಗಿ ಬ್ಯಾಂಕ್ ನ ಎಟಿಎಂ ಒಡೆದು ಹಣ ದೋಚಲು ಕಳ್ಳನೊಬ್ಬ ಯತ್ನಿಸಿದ್ದಾನೆ. ಮೂರುಗೋಳಿ ಜಂಕ್ಷನ್ ಬಳಿ ಇರುವ ಎಟಿಎಂ ನಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದೆ.


ಸೋಮವಾರ ರಾತ್ರಿ ಗಂಟೆ ಸುಮಾರು 1.30ರ ಆಸುಪಾಸು ಕಳ್ಳನೊಬ್ಬ ಎಟಿಎಂಗೆ ನುಗ್ಗಿ ಎಟಿಎಂ ಒಡೆದು ಹಣ ದೋಚಲು ಯತ್ನಿಸಿ ವಿಫಲನಾಗಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.


ಸಂಬಂಧಪಟ್ಟವರಿಂದ ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *