Tue. Apr 15th, 2025

Belthangadi: ಭಾರತ್ ಬ್ಯಾಂಕ್ ಉಜಿರೆ ಶಾಖೆಯ ದಶಮಾನೋತ್ಸವ ಪ್ರಯುಕ್ತ ದೇವತಾ ಕಾರ್ಯಗಳು ಸಂಪನ್ನ

ಬೆಳ್ತಂಗಡಿ:(ಅ.30) ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬಯಿ ಇದರ‌ ಉಜಿರೆ ಶಾಖೆಯಲ್ಲಿ ಬ್ಯಾಂಕಿನ ದಶಮಾನೋತ್ಸವ ಹಾಗೂ ದೀಪಾವಳಿ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ಶ್ರೀ ಗುರುಪೂಜೆ ಹಾಗೂ ಧನಲಕ್ಷ್ಮೀ ಪೂಜೆಯು ಅ.30 ರಂದು ನಡೆಯಿತು.

ಇದನ್ನೂ ಓದಿ: 🟠ಉಜಿರೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ “ಕುಕ್ಕಿಂಗ್ ವಿತೌಟ್ ಫೈರ್ ” ಸ್ಪರ್ಧೆ

ಹರೀಶ್‌ ಶಾಂತಿ ಅವರು ಧಾರ್ಮಿಕ ಕೈಂಕರ್ಯದ ನೇತೃತ್ವ ವಹಿಸಿದ್ದರು.


ಬ್ಯಾಂಕಿನ ಗ್ರಾಹಕರಲ್ಲಿ ಪ್ರಮುಖರಾದ ಪೀತಾಂಬರ ಹೇರಾಜೆ, ತಾರಾವತಿ, ಯೋಗೀಶ್ ಪಿ ಕಡ್ತಿಲ, ಇಂಜಿನಿಯರ್‌ ಜಗದೀಶ್ ಪ್ರಸಾದ್ ಎನ್, ತಮನ್ಮಾ ಹೋಮ್ ಸ್ಟೇ ಮಾಲಿಕ ಅಶ್ರಫ್ ಆಲಿಕುಂಞಿ ಮುಂಡಾಜೆ, ಉದ್ಯಮಿ ಮಂಜುನಾಥ ಕಾಮತ್, ರಾಘವೇಂದ್ರ ಬೈಪಡಿತ್ತಾಯ,

ರಘುರಾಮ ಶೆಟ್ಟಿ, ಅಖಿಲೇಶ್ ಕುಮಾರ್ ಶೆಟ್ಟಿ, ರವೀಂದ್ರ ಪೂಜಾರಿ ಆರ್ಲ, ಹೆಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಕಂಪೆನಿಯ ಪ್ರತಿನಿಧಿಗಳಾದ ವಿಜೇಶ್ ಮತ್ತು ಸುರೇಂದ್ರ ಪೂಜಾರಿ, ಬಿರ್ಲಾ ಸನ್‌ಲೈಫ್ ಇನ್ಶೂರೆನ್ಸ್ ಕಂಪೆನಿಯ ಪ್ರತಿನಿಧಿಗಳಾದ ಮೈತ್ರಿ ಜಯಾನಂದ ಹಾಗೂ ಇತರ ಗ್ರಾಹಕ ವೃಂದದವರು ಉಪಸ್ಥಿತರಿದ್ದರು.

ಬ್ಯಾಂಕಿನ ಮಹಾಪ್ರಬಂಧಕ ಅರುಣ್ ಕುಮಾರ್ ಜಿ ಕೋಟ್ಯಾನ್, ಶಾಖಾ ಪ್ರಬಂಧಕ ಉಮೇಶ್ ಕೋಟ್ಯಾನ್, ಉಪ ಶಾಖಾ ಪ್ರಬಂಧಕಿ ಶ್ವೇತಾ ಆರ್ ಪೂಜಾರಿ, ಸಿಬ್ಬಂದಿಗಳಾದ ಮಂಜುನಾಥ್ ಜನಾರ್ದನ್, ಸುಧೀರ್ ಕೆ ಸಾಲಿಯಾನ್, ಸಂದೀಪ್ ವಿ ಅಮೀನ್, ಭಾಸ್ಕರ ಬಂಗೇರ, ಸುದರ್ಶನ್ ಡಿ ಸುವರ್ಣ ಇವರುಗಳು ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.

Leave a Reply

Your email address will not be published. Required fields are marked *