Sat. Apr 19th, 2025

Shivamogga: ಯಮನಾಗಿ ಎದುರಾದ ಜಾಹೀರಾತು ಫಲಕದ ಕಂಬ – ಬೈಕ್ ಡಿಕ್ಕಿಯಾಗಿ ಸ್ನೇಹಿತರಿಬ್ಬರು ಸ್ಪಾಟ್‌ ಡೆತ್!!

ಶಿವಮೊಗ್ಗ:(ನ.9) ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದ ವೇಳೆ ಜಾಹೀರಾತು ಫಲಕದ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಜೀವ ಚೆಲ್ಲಿದ ಘಟನೆ ನಡೆದಿದೆ. ಜಾಹೀರಾತು ಕಂಬಕ್ಕೆ ಬೈಕ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಯುವಕರಿಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಶಿವಮೊಗ್ಗದ ಕಾನೇಹಳ್ಳ ಕ್ರಾಸ್ ಬಳಿ ನಡೆದಿದೆ.

ಇದನ್ನೂ ಓದಿ: 💔ಬ್ರೇಕಪ್‌ನಿಂದ ಹೊರ ಬರಲು ಒಂದು ವಾರ ರಜೆ ಕೊಡಿ ಎಂದ ಉದ್ಯೋಗಿ..‼

ಮೃತರನ್ನು ಆರ್‌ಎಂಎಲ್ ನಗರದ ನಿವಾಸಿ ನಿಸಾರ್, ಮಂಜುನಾಥ ಬಡಾವಣೆ ನಿವಾಸಿ ಯಶವಂತ್ ಎಂದು ಗುರುತಿಸಲಾಗಿದೆ. ಮೃತರು ಗಾಜನೂರಿನ ಐಟಿಐ ಕಾಲೇಜು ವಿದ್ಯಾರ್ಥಿಗಳು. ಎಂದಿನಂತೆ ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿದ್ದ ಜಾಹೀರಾತು ಕಂಬಕ್ಕೆ ಬೈಕ್ ಡಿಕ್ಕಿಯಾಗಿದೆ.

ಈ ವೇಳೆ ಸವಾರರ ತಲೆಗೆ ಬಲವಾದ ಹೊಡೆತ ಬಿದ್ದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಯಶವಂತ್ ದ್ವಿತೀಯ ವರ್ಷದ ಹಾಗೂ ನಿಸಾರ್ ಮೊದಲನೇ ವರ್ಷದ ಐಟಿಐ ವಿದ್ಯಾರ್ಥಿಯಾಗಿದ್ದರು.


ಸ್ಥಳಕ್ಕೆ ತುಂಗಾ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *