Wed. Nov 20th, 2024

Bengaluru: ನಟ ಶಿವರಾಜ್ ಕುಮಾರ್ ಗೆ ಕಾಡುತ್ತಿದೆ ಆ ಮಾರಣಾಂತಿಕ ಖಾಯಿಲೆ!!! – ಶಿವಣ್ಣ ಹೇಳಿದ್ದೇನು?!!

ಬೆಂಗಳೂರು: (ನ.10) ಮೊನ್ನೆಯಿಂದಲೂ ಚಂದನವನದಲ್ಲಿ ಶಿವಣ್ಣನಿಗೆ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ಇದು ರೂಮರ್ಸ್ ಎಂದು ಅಭಿಮಾನಿಗಳು ಹಾಗೂ ಜನಸಾಮಾನ್ಯರು ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಈ ಬಗ್ಗೆ ನಟ ಶಿವರಾಜ್ ಕುಮಾರ್ ಅವರ ಸ್ಪಷ್ಟೀಕರಣ ನೀಡಿದ್ದಾರೆ. ಹೀಗಾಗಿ ಇದೀಗ ಶಿವರಾಜ್ ಕುಮಾರ್ ಅವರಿಗೆ ಮಾರಣಾಂತಿಕ ಖಾಯಿಲೆ ಕಾಡುತ್ತಿದೆ ಎಂಬ ವಿಚಾರ ಬಹಿರಂಗವಾಗಿದೆ.

ಇದನ್ನೂ ಓದಿ: ⭕ನೆಲಮಂಗಲ: ಮನೆ ಬಾಡಿಗೆ ಕೇಳುವ ನೆಪದಲ್ಲಿ ಕಳ್ಳತನ

ಶಿವರಾಜ್ ಕುಮಾರ್ ಅವರ ಕುರಿತಾದ ಒಂದು ಸುದ್ದಿ ಇಂಡಸ್ಟ್ರಿಯಲ್ಲಿ ಸಣ್ಣಗೆ ಹರಿದಾಡ್ತಾನೇ ಇತ್ತು. ಈ ಹಿನ್ನಲೆಯಲ್ಲಿ ತಮ್ಮ ನೆಚ್ಚಿನ ನಟ ಮಂಕಾಗಿರುವುದನ್ನೇ ಸಹಿಸಲಾಗದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಬ್ಯಾಡ್‌ ನ್ಯೂಸ್‌ ಸಿಕ್ಕಿದೆ. ನಟ ಶಿವರಾಜ್‌ಕುಮಾರ್‌ ಅವರಿಗೆ ಕ್ಯಾನ್ಸರ್‌ ಸಮಸ್ಯೆ ಕಾಡುತ್ತಿದೆ ಎಂಬ ವಿಷಯ ತಿಳಿದು ಬಂದಿದೆ!!

ಹಾಗಂತ ಅದನ್ನು ಶಿವಣ್ಣ ಮುಚ್ಚಿಡೋಕೆ ಹೋಗಿಲ್ಲ..ಬದಲಾಗಿ ಹೌದು ಪ್ರಾಬ್ಲಂ ಇದೆ ಅಂತಲೇ ಇದೀಗ ಸಂದರ್ಶನದಲ್ಲಿ ಹೇಳಿದ್ದಾರೆ. ಅದಕ್ಕೆ ಟ್ರೀಟ್‌ಮೆಂಟ್ ಕೂಡ ಶುರು ಆಗಿದೆ. ಈಗಾಗಲೇ ಈ ಒಂದು ತೊಂದರೆಯಲ್ಲಿಯೇ ಸಿನಿಮಾ ಕೆಲಸ ಕೂಡ ನಡೆಯುತ್ತಿದೆ. ಹಾಗಂತ ಇದನ್ನು ಮುಚ್ಚಿಡೋದ್ರಲ್ಲಿ ಏನ್ ಅರ್ಥ ಇದೆ ಹೇಳಿ…? ಯಾಕೆ ಮುಚ್ಚಿಡಬೇಕು ಹೇಳಿ? ಹೀಗೆ ಶಿವಣ್ಣ ಪ್ರಶ್ನೆ ಮೇಲೆ ಪ್ರಶ್ನೆ ಕೂಡ ಕೇಳಿದ್ದಾರೆ.

ತಾವು ಈ ಕ್ಯಾನ್ಸರ್‌ ಖಾಯಿಲೆಗಾಗಿ ಸದ್ಯ ಟ್ರೀಟ್‌ಮೆಂಟ್‌ ಪಡೆದುಕೊಳ್ಳುತ್ತಿದ್ದು, ಇನ್ನೂ 4 ಸೆಷನ್‌ಗಳಲ್ಲಿ ಟ್ರೀಟ್‌ಮೆಂಟ್‌ ಪಡೆಯಬೇಕಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಶಿವಣ್ಣ ಅವರನ್ನು ಕಾಡುತ್ತಿರುವುದು, ಮೂತ್ರಕೋಶದ ಕ್ಯಾನ್ಸರ್‌. ಇದನ್ನು ಸ್ವತಃ ಶಿವಣ್ಣ ಅವರ ಬಿಚ್ಚಿಟ್ಟಿದ್ದು, ತಮ್ಮ ಅಭಿಮಾನಿಗಳಿಗೂ ಕೂಡ ಈ ಕುರಿತು ಗೊತ್ತಿರಬೇಕು ಎಂದು ಈ ಕುರಿತು ಕ್ಲಾರಿಟಿ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *