Wed. Nov 20th, 2024

Bengaluru: ಬೆಂಜ್ ಕಾರು ಡಿಕ್ಕಿಯಾಗಿ ಫ್ಯಾಷನ್ ಡಿಸೈನರ್ ಸಾವು ಪ್ರಕರಣದಲ್ಲಿ ಮತ್ತಷ್ಟು ರೋಚಕ ಸಂಗತಿ ಬಯಲು!!!

ಬೆಂಗಳೂರು (ನ.10) : ಇತ್ತೀಚೆಗೆ ಕೆಂಗೇರಿಯ ಬಸ್ ನಿಲ್ದಾಣದ ಬಳಿ ನಡೆದಿದ್ದ ಬೆಂಜ್ ಕಾರ್ ಅಪಘಾತ ಪ್ರಕರಣದ ಮತ್ತೊಂದು ಸತ್ಯ ಇದೀಗ ಬಯಲಾಗಿದೆ. ಈಗಾಗಲೇ ಬಂಧಿತನಾಗಿರುವ ಬೆಂಜ್ ಕಾರು ಚಾಲಕ ಧನುಷ್ ಕಾರಿನಲ್ಲೇ ಕೂತು ಮದ್ಯಪಾನ ಮಾಡಿದ್ದು, ಕೆಂಗೇರಿ ಸಂಚಾರ ಪೊಲೀಸರ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ. ಅಷ್ಟಲ್ಲದೇ ಆರೋಪಿ ಮದ್ಯ ಖರೀದಿ ಮಾಡಿದ್ದೆಲ್ಲಿ, ಕುಡಿದಿದ್ದೆಷ್ಟು ಎಂಬ ವಿಚಾರಗಳು ಕೂಡ ತನಿಖೆಯಲ್ಲಿ ಗೊತ್ತಾಗಿದ್ದು, ಆರೋಪಿ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ.

ಇದನ್ನೂ ಓದಿ: ⚠ಬೆಂಗಳೂರು: ಕೇರಳದಿಂದ ಆಮದು ಆಗುತ್ತಿರುವ ಆಹಾರ ಪದಾರ್ಥ ತಿನ್ನುವ ಮುಂಚೆ ಎಚ್ಚರ!!

ಬೆಂಜ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಸಂಧ್ಯಾ ಪ್ರಾಣ ತೆಗೆದಿದ್ದ ಧನುಷ್, ಮದ್ಯಪಾನ ಮಾಡಿರುವುದು ಆ ವೇಳೆಯೇ ಖಚಿತಪಟ್ಟಿತ್ತು. ಹೀಗಾಗಿ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ಕೂಡ ದಾಖಲಿಸಿದ್ದರು. ತನಿಖೆ ವೇಳೆ, ಆತ ನಾಯಂಡಹಳ್ಳಿ ಬಳಿ ಎಣ್ಣೆ ಖರೀದಿ ಮಾಡಿರುವುದು ಗೊತ್ತಾಗಿದೆ. ಸ್ನೇಹಿತನ ಜೊತೆ ಸೇರಿ ಎಣ್ಣೆ ಖರೀದಿಸಿ ಕಾರಿನಲ್ಲೇ ಎಣ್ಣೆ ಹೊಡೆದಿರುವ ಶಂಕೆ ಕೂಡ ಇದೆ.

ಕಾರಲ್ಲೇ ಮದ್ಯಪಾನ ಮಾಡಿ ಅತಿವೇಗದ ಚಾಲನೆ:


ಕಾರಲ್ಲೇ ಮದ್ಯಪಾನ ಮಾಡಿದ ಬಳಿಕ, ಮೈಸೂರು ಬೆಂಗಳೂರು ರಸ್ತೆಯಲ್ಲಿ ಅತಿವೇಗದಲ್ಲಿ ಕಾರು ಚಲಾಯಿಸಿದ್ದು, ಕೆಂಗೇರಿ ಬಸ್ ನಿಲ್ದಾಣದ ಬಳಿ ಬಂದಾಗ ಹಂಪ್​ ಅನ್ನೂ ಎಗರಿಸಿ ಸಂಧ್ಯಾಗೆ ಡಿಕ್ಕಿ ಹೊಡೆದಿದ್ದಾನೆ. ಇದಕ್ಕೆಲ್ಲ ಪೊಲೀಸರು ಸಾಕಷ್ಟು ಸಾಕ್ಷ್ಯ ಸಂಗ್ರಹಿಸಿದ್ದಾರೆ.

ಆರೋಪಿ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷ್ಯಗಳೇನು?

  • ಆರೋಪಿ ಧನುಷ್ ಬಾರ್​​ನಲ್ಲಿ ಮದ್ಯ ಖರೀದಿಸಿದ ಸಿಸಿಟಿವಿ ದೃಶ್ಯ ಪತ್ತೆ.
  • ಅಪಘಾತ ಜಾಗದ ಹಿಂದಿದ್ದ ಹಂಪ್​​ನಲ್ಲೂ ವೇಗವಾಗಿ ಚಾಲನೆ.
  • ಡಿಡಿ ಚೆಕ್ ಮಾಡಿದಾಗ 177% ಆಲ್ಕೋಹಾಲ್ ಸೇವನೆ ಪತ್ತೆ.
  • ಅಪಘಾತ ಸಂಬಂಧ 6 ಮಂದಿ ಪ್ರಮುಖ ಸಾಕ್ಷ್ಯಗಳ ಹೇಳಿಕೆ ಸಂಗ್ರಹ.
  • ಮದ್ಯ ಖರೀದಿ ಮಾಡಿದ ಬಾರ್​ನ ಇಬ್ಬರು ವ್ಯಕ್ತಿಗಳ ಹೇಳಿಕೆ.
  • ಮದ್ಯ ಖರೀದಿ ಮಾಡಿದ್ದನ್ನ ಗುರುತಿಸಿದ ಇಬ್ಬರು ವ್ಯಕ್ತಿಗಳ ಹೇಳಿಕೆ.
  • ಅಪಘಾತ ನಡೆದ ಸ್ಥಳದಲ್ಲಿದ್ದ ನಾಲ್ವರು ವ್ಯಕ್ತಿಗಳ ಹೇಳಿಕೆ ದಾಖಲು.
  • ಸ್ಥಳದಲ್ಲಿದ್ದ ಆಟೋ ಚಾಲಕರ ಹೇಳಿಕೆ ಕೂಡ ದಾಖಲು.
  • ಕಾರ್ ಬಂದಿರುವುದು ಘಟನಾ ಸ್ಥಳದಲ್ಲಿದ್ದ ಎರಡು ಸಿಸಿಟಿವಿಗಳಲ್ಲಿ ಪತ್ತೆ.
  • ಆದರೆ, ಅಪಘಾತ ನಡೆದ ಜಾಗದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ.
  • ಹೀಗೆ ಪೊಲೀಸರು ಧನುಷ್ ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಅಷ್ಟಲ್ಲದೇ, ಅಪಘಾತ ಸ್ಥಳ ಹಾಗೂ ಬೆಂಜ್ ಕಾರಿನಲ್ಲಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ಧನುಷ್ ಡಿಡಿ ಚೆಕ್ ಮಾಡಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಸದ್ಯ ಆರೋಪಿ ರಕ್ತದ ಮಾದರಿಯ ವರದಿ ಬರುವುದು ಬಾಕಿಯಿದೆ. ಆದರೆ, ಬೆಂಜ್ ಕಂಪನಿ ಸಿಬ್ಬಂದಿ ಕರೆಸಿ ಕಾರ್ ಪರಿಶೀಲನೆ ಮಾಡಿಸಿದಾಗ ಡ್ಯಾಶ್ ಕ್ಯಾಮರಾದಲ್ಲಿ ಅಪಘಾತ ದೃಶ್ಯ ಪತ್ತೆಯಾಗಿಲ್ಲ.

ಒಟ್ಟಿನಲ್ಲಿ ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಅಪಘಾತ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಾವಳಿ ಒದಗಿಸಬೇಕೆಂದು ಸಂಧ್ಯಾ ಪೋಷಕರು ಹೈಕೋರ್ಟ್​ನಲ್ಲಿ ಅರ್ಜಿ ಹಾಕಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಒದಗಿಸಲು ಟ್ರಾಫಿಕ್ ಪೊಲೀಸರಿಗೆ ನಿರ್ದೇಶಿಸುವಂತೆ ಅರ್ಜಿ ಹಾಕಿದ್ದು, ಪ್ರಕರಣ ವಿಚಾರಣೆಗೆ ಬರಬೇಕಿದೆ.

Leave a Reply

Your email address will not be published. Required fields are marked *