ಕೇರಳ:(ನ.10) ಹೆಲ್ಮೆಟ್ ಹಾಕದೆ ಬೈಕ್ ಸವಾರಿ ಮಾಡಿ ಕೇರಳದ ವ್ಯಕ್ತಿಯೋರ್ವ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.
ಕೇರಳದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸದೇ ತನ್ನ ಸ್ಕೂಟರ್‌ನಲ್ಲಿ ಪ್ರಯಾಣ ಮಾಡಿದ್ದಾನೆ. ಇದು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ: ⭕ಮೀರತ್: ನಿದ್ರೆಗೆ ಭಂಗ ತಂದಿದ್ದಕ್ಕಾಗಿ 5 ನಾಯಿಮರಿಗಳನ್ನು ಜೀವಂತವಾಗಿ ಸುಟ್ಟ ಮಹಿಳೆಯರು!!
ನಿಯಮ ಉಲ್ಲಂಘಿಸಿದ್ದಕ್ಕಾಗಿ ರಸ್ತೆ ಸುರಕ್ಷತಾ ನಿಯಮದ ಅಡಿ ಪೊಲೀಸರು ಆ ವ್ಯಕ್ತಿಯ ಮನೆಗೆ ದಂಡದ ಮೊತ್ತದ ಜೊತೆಗೆ ಸಿಸಿಟಿವಿಯಲ್ಲಿ ಸೆರೆಯಾದ ಫೋಟೋಗಳನ್ನು ಕಳುಹಿಸಿದ್ದಾರೆ.
ಇನ್ನು ಒಂದು ಅಚ್ಚರಿಯ ಸಂಗತಿ ಅಂದ್ರೆ ಸ್ಕೂಟರ್ ಆ ವ್ಯಕ್ತಿಯ ಪತ್ನಿಯ ಹೆಸರಲ್ಲಿತ್ತು, ಮನೆಗೆ ಬಂದ ದಂಡದ ಮೊತ್ತ ಹಾಗೂ ಫೋಟೋವನ್ನು ಗಮನಿಸಿದಾಗ, ಸ್ಕೂಟರ್ ಹಿಂದೆ ಬೇರೆ ಮಹಿಳೆಯೊಬ್ಬಳ ಜೊತೆ ತನ್ನ ಪತಿ ಹೋಗುತ್ತಿರುವುದು ಕಂಡು ಬಂದಿದೆ. ಇದರಿಂದ ರೊಚ್ಚಿಗೆದ್ದ ಆತನ ಪತ್ನಿ ಪತಿಯನ್ನು ನಿಮ್ಮ ಹಿಂದೆ ಕುಳಿತಿದ್ದ ಯುವತಿ ಯಾರು?ಎಂದು ಕೇಳಿದ್ದಾಳೆ.
ಅದಕ್ಕೆ ಪತಿ, ಯಾರು ಇಲ್ಲ, ಹಾದಿಯಲ್ಲಿ ಯಾರೋ ಲಿಫ್ಟ್ ಕೇಳಿದ್ರು, ಅದಕ್ಕೆ ಲಿಫ್ಟ್ ಕೊಟ್ಟೆ ಅಂತ ಹೇಳಿದ್ದಾನೆ. ಈ ಒಂದು ವಿಚಾರ ತಾರಕಕ್ಕೆ ಹೋಗಿದೆ.
ಪತಿಯ ಯಾವುದೇ ಮಾತನ್ನು ಯಾವುದೇ ವಿವರಣೆಯನ್ನೂ ನಂಬದ ಪತ್ನಿ ನೇರವಾಗಿ ಕರಮಾನಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಗಂಡನ ಮೇಲೆ ಕಿರುಕುಳ ಹಾಗೂ ಹಲ್ಲೆಯ ಪ್ರಕರಣ ದಾಖಲಿಸಿದ್ದಾಳೆ.
ಅವಳ ಹೇಳಿಕೆ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆಕೆಯ ಪತಿ ವಿರುದ್ಧ ಐಪಿಸಿ ಸೆಕ್ಷನ್ 321, 341, 294 ಹಾಗೂ 75ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈಗಾಗಲೇ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿದೆ. ಒಂದೇ ಒಂದು ರಸ್ತೆ ನಿಯಮ ಉಲ್ಲಂಘನೆ ಕೇಸ್ ಇಷ್ಟೆಲ್ಲಾ ಸಮಸ್ಯೆಗಳನ್ನು ಸೃಷ್ಟಿಮಾಡಿದೆ.