ಉತ್ತರ ಪ್ರದೇಶ:(ನ.16)ಪೊಲೀಸ್ ಕಾನ್‌ಸ್ಟೇಬಲ್ ಒಬ್ಬ ವರದಕ್ಷಿಣೆಯಾಗಿ 30 ಲಕ್ಷ ರೂಪಾಯಿ ಬೇಡಿಕೆಯಿಟ್ಟು ಪೊಲೀಸರ ಅತಿಥಿಯಾದ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ. ಪೊಲೀಸ್ ಕಾನ್ಸ್‌ಟೇಬಲ್ ರವಿ ಕುಮಾರ್ ಎಂಬುವವರ ಮದುವೆ ನಡೆದಿತ್ತು.
ಇದನ್ನೂ ಓದಿ: ⭕ಉತ್ತರಾಖಂಡ್: ಓವರ್ ಸ್ಪೀಡ್ ನಲ್ಲಿ ಬರುತ್ತಿದ್ದ ಕಾರು ಟ್ರಕ್ ಗೆ ಡಿಕ್ಕಿ
ಮದುವೆಯ ಎಲ್ಲಾ ಸಾಂಪ್ರದಾಯಿಕ ಪದ್ಧತಿಗಳು ಸಾಂಗವಾಗಿ ನಡೆಯುತ್ತಿದ್ದವು ಏಕಾಏಕಿ ಮದುಮಗ ರವಿ ಕುಮಾರ್ ಕೂಡಲೇ ವರದಕ್ಷಿಣೆ ಹಣವಾಗಿ 30 ಲಕ್ಷ ರೂಪಾಯಿ ನೀಡಬೇಕು ಎಂದು ಪಟ್ಟು ಹಿಡಿದು ಕುಳಿತ.
ಇದನ್ನು ಕೇಳಿ ಹುಡುಗಿಯ ಕಡೆಯವರು ಅಕ್ಷರಶಃ ಶಾಕ್ ಗೆ ಒಳಗಾಗಿದ್ದರು. ಮದುಮಗನ ಈ ಹಠ ನೋಡಿ ಅವನನ್ನು ಮದುವೆಯಾಗಬೇಕಿದ್ದ ಹುಡುಗಿ ಮದುವೆಯೇ ಬೇಡವೆಂದ ಮದುವೆ ಮಂಟಪ ಬಿಟ್ಟು ಹೋದ ಘಟನೆ ನಡೆದಿದೆ.
ನವೆಂಬರ್ 13ರ ರಾತ್ರಿ ಈ ಒಂದು ಘಟನೆ ನಡೆದಿದ್ದು ಮೂಲಗಳು ಹೇಳುವ ಪ್ರಕಾರ ಮದುವೆಯ ಎಲ್ಲ ಪದ್ಧತಿಗಳು ಸರಿಯಾಗಿ ನಡೆದು ವಧು ವರ ಹೂವಿನ ಹಾರಗಳನ್ನು ಬದಲಾಯಿಸುವ ಸಮಯದಲ್ಲಿ ವರ ಹಾಗೂ ಆತನ ಕುಟುಂಬದವರು ಕೂಡಲೇ ವರದಕ್ಷಿಣೆ ಹಣ ನೀಡಬೇಕು ಎಂದು ಪಟ್ಟು ಹಿಡಿದ್ದಾರೆ. ಹಣ ನೀಡದೇ ಇದ್ದ ಪಕ್ಷದಲ್ಲಿ ಮದುವೆಯ ಮುಂದಿನ ಪ್ರಕ್ರಿಯೆಗಳನ್ನು ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ವಧುವಿನ ಕಡೆಯವರು ಎಷ್ಟೇ ಬೇಡಿಕೊಂಡರು, ಚೌಕಾಶಿ ಮಾಡಿದರು 30 ಲಕ್ಷ ರೂಪಾಯಿಗಿಂತ ಕಡಿಮೆ ಇಲ್ಲದೇ ಈ ಮದುವೆ ನಡೆಯುವುದಿಲ್ಲ ಎಂದು ಹಠ ಹಿಡಿದು ಕುಳಿತುಕೊಂಡಿದೆ ವರ ಹಾಗೂ ಆತನ ಕುಟುಂಬ.