Tue. Apr 8th, 2025

Kasaragodu : ನಾಟಕ ತಂಡದ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ಅಪಘಾತ – ಇಬ್ಬರು ನಟಿಯರು ಸ್ಪಾಟ್‌ ಡೆತ್ !!

ಕಾಸರಗೋಡು :(ನ.17) ನಾಟಕ ತಂಡದವರು ಪ್ರಯಾಣಿಸುತ್ತಿದ್ದ ಬಸ್ ಅಪಘಾತವಾಗಿ ಇಬ್ಬರು ನಟಿಯರು ಸಾವಿಗೀಡಾಗಿದ್ದು, 12 ಮಂದಿ ಗಾಯಗೊಂಡ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಇದನ್ನೂ ಓದಿ:⭕ಪುತ್ತೂರು: ಮಹಡಿ ಮೇಲಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು!!!

ಕಣ್ಣೂರು ಜಿಲ್ಲೆಯ ಕೆಳಕಂ ಪಂಚಾಯತ್‌ ವ್ಯಾಪ್ತಿಯ ಮಲಯಂಪಾಡಿ ಎಸ್‌ ತಿರುವಿನಲ್ಲಿ ರಂಗಭೂಮಿ ಕಲಾವಿದರು ಸಂಚರಿಸುತ್ತಿದ್ದ ಮಿನಿ ಬಸ್ಸೊಂದು ರಬ್ಬರ್‌ ತೋಟಕ್ಕೆ ಮಗುಚಿ ಬಿದ್ದು ಬಸ್‌ನ ಮುಂಭಾಗದಲ್ಲಿ ಕುಳಿತಿದ್ದ ಕಾಯಂಕುಳಂ ನಿವಾಸಿ ಅಂಜಲಿ (32) ಮತ್ತು ಕರುನಾಗಪಳ್ಳಿ ನಿವಾಸಿ ಜೆಸ್ಸಿ ಮೋಹನ್‌ (58) ಸಾವಿಗೀಡಾಗಿದ್ದಾರೆ. ಅಲ್ಲದೆ 12 ಮಂದಿ ಗಾಯಗೊಂಡಿದ್ದಾರೆ.

ಗೂಗಲ್‌ ಮ್ಯಾಪ್‌ ನೋಡಿಕೊಂಡು ಚಾಲಕ ಮಿನಿ ಬಸ್‌ ಚಲಾಯಿಸಿದ್ದಾರೆ. ಸಣ್ಣ ವಾಹನಗಳಿಗೆ ಮಾತ್ರ ಸುಗಮವಾಗಿ ಸಂಚರಿಸಲು ಸಾಧ್ಯವಿರುವ ಏರಿಳಿತದಿಂದ ಕೂಡಿದ ಈ ರಸ್ತೆಯಲ್ಲಿ ಸಾಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಅಂದಹಾಗೆ ನಾಟಕ ತಂಡದಲ್ಲಿ 14 ಜನರಿದ್ದು, ಗಾಯಗೊಂಡ ಕಾಯಂಕುಳಂ ನಿವಾಸಿಗಳಾದ ಉಣ್ಣಿ, ಉಮೇಶ್‌, ಸುರೇಶ್‌, ಶಿಬು, ಎರ್ನಾಕುಳಂ ನಿವಾಸಿಗಳಾದ ವಿಜಯ ಕುಮಾರ್‌, ಬಿಂದು, ಕಲ್ಲುವಾದುಕ್ಕಲ್‌ನ ಚೆಲ್ಲಪ್ಪನ್‌, ಕೊಲ್ಲಂನ ಶ್ಯಾಮ್‌ ಮತ್ತು ಅದಿರುಂಗಲ್‌ನ ಸುಭಾಷ್‌ ಸಹಿತ 9 ಮಂದಿಯನ್ನು ಕಣ್ಣೂರು ಜಿಲ್ಲೆಯ ಚಾಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಗಾಯಗೊಂಡಿರುವ ಮಿನಿ ಬಸ್‌ ಚಾಲಕ ಮತ್ತು ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.

Leave a Reply

Your email address will not be published. Required fields are marked *