Fri. Apr 11th, 2025

Dharmasthala: ರಾಷ್ಟ್ರೀಯ ತುಳು ಗುಡಿಗಾರರ ಸಂಘ (ರಿ.) ದ.ಕ.ಜಿಲ್ಲೆ – ಉಡುಪಿ ಜಿಲ್ಲೆ ಕಟ್ಟದಬೈಲು ಧರ್ಮಸ್ಥಳ ಇದರ ಆಶ್ರಯದಲ್ಲಿ ರಾಷ್ಟ್ರೀಯ ತುಳು ಗುಡಿಗಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕೆಸರು ಗದ್ದೆ ಕಾರ್ಯಕ್ರಮ

ಧರ್ಮಸ್ಥಳ :(ನ.18) ರಾಷ್ಟ್ರೀಯ ತುಳು ಗುಡಿಗಾರರ ಸಂಘ ದಕ್ಷಿಣ ಕನ್ನಡ ಜಿಲ್ಲೆ – ಉಡುಪಿ ಜಿಲ್ಲೆ ಕಟ್ಟದಬೈಲು ಧರ್ಮಸ್ಥಳ ಇದರ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ 2023-24 ಮತ್ತು ಕೆಸರು ಗದ್ದೆ ಕಾರ್ಯಕ್ರಮವು ನ.17 ರಂದು ಶ್ರೀ ರಾಮಭಜನಾ ಮಂದಿರ ಕಟ್ಟದಬೈಲಿನಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ರಾಷ್ಟ್ರೀಯ ತುಳು ಗುಡಿಗಾರ್ ಸಂಘದ ಅಧ್ಯಕ್ಷರಾದ ರವೀಂದ್ರ ಗುಡಿಗಾ‌ರ್ ರವರು ವಹಿಸಿದ್ದರು.

ಇದನ್ನೂ ಓದಿ: ⭕ಮಲ್ಪೆ: ನೀರಿನ ಡ್ರಮ್ ಒಳಗೆ ಬಸ್ ಡ್ರೈವರ್ ಮೃತದೇಹ ಪತ್ತೆ

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ತುಳು ಗುಡಿಗಾರ್ ಸಂಘ ಉಪಾಧ್ಯಕ್ಷರಾದ ಮಂಜುನಾಥ ಗುಡಿಗಾರ್ ಕಟ್ಟದಬೈಲು, ಶಾಂತಿರಾಜ್ ಗುಡಿಗಾರ್ ಅಳದಂಗಡಿ, ಜೊತೆ ಕಾರ್ಯದರ್ಶಿ ಆದರ್ಶ ಗುಡಿಗಾರ್,

ಕೋಶಾಧಿಕಾರಿ ಕವಿತಾ ರಾಜೇಂದ್ರ ಗುಡಿಗಾರ್ ಅಂತರಬೈಲು, ನಿರ್ದೇಶಕರಾದ ರಮೇಶ್ ಗುಡಿಗಾರ್ ಅಂತರಬೈಲು, ಉದಯ ಗುಡಿಗಾರ್, ಮುಂಬೈ, ಗಣೇಶ ಗುಡಿಗಾರ್ ನಾವೂರು, ದೇವಿಪ್ರಸಾದ್ ಎನ್. ಗುಡಿಗಾರ್ ಉಡುಪಿ, ಚಂದ್ರಶೇಖರ ಗುಡಿಗಾರ್ ಸವಣಾಲು, ಪ್ರಮೋದ್ ಗುಡಿಗಾರ್ ಉಡುಪಿ, ಸತ್ಯನಾರಾಯಣ ಗುಡಿಗಾರ್ ಅಂತರಬೈಲು, ವಿಘ್ನೇಶ್ ಗುಡಿಗಾರ್ ಅಂತರಬೈಲು ಉಪಸ್ಥಿತರಿದ್ದರು.

ಈ ವೇಳೆ ಮಕ್ಕಳಿಗೆ ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಸಂಜೆ ನಡೆದ ಸಮಾರೋಪದಲ್ಲಿ ಹಲವು ಗಣ್ಯರು ಭಾಗವಹಿಸಿ ಆಟೋಟ ಸ್ಪರ್ಧೆಯಲ್ಲಿ ಜಯಶಾಲಿಯಾದ ಎಲ್ಲಾ ಸ್ಪರ್ಧಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ತುಳು ಗುಡಿಗಾರರ ಸಂಘ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು