Fri. Apr 18th, 2025

Mogru: ಕಡಮ್ಮಾಜೆ ಫಾರ್ಮ್ ನಲ್ಲಿ ಮೂರನೇ ವರ್ಷದ ಎರಡು ದಿನಗಳ ಜೇನು ಕೃಷಿ ಮಾಹಿತಿ ಶಿಬಿರ

ಮೊಗ್ರು :(ನ.23) ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ ಹೌಸ್ ನಲ್ಲಿ ನ. 23 ರಂದು ಮೂರನೇ ವರ್ಷದ ಎರಡು ದಿನಗಳ ಜೇನು ಕೃಷಿ ಮಾಹಿತಿ ಶಿಬಿರ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.

ಇದನ್ನೂ ಓದಿ: ⭕ಉಳ್ಳಾಲ: ವಾಣಿ ಆಳ್ವ ಅಧಿಕಾರವಧಿಯಲ್ಲೇ ಸೋಮೇಶ್ವರದಲ್ಲಿ ಗೆಸ್ಟ್ ಹೌಸ್ ಮಾಫಿಯ ಬೆಳೆದಿದೆ -ಸುಖೇಶ್ ಉಚ್ಚಿಲ್ ಆರೋಪ

ಕಡಮ್ಮಾಜೆ ಫಾರ್ಮ್ಸ್ ನ ಶ್ರೀಮತಿ ಕುಸುಮಾವತಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಣಿಯೂರು ಪಂಚಾಯತ್ ಅಧ್ಯಕ್ಷರಾದ ಸೀತಾರಾಮ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.

ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಮುಖ್ಯ ಅತಿಥಿಗಳಾಗಿ ಸಂದರ್ಬೋಚಿತವಾಗಿ ಮಾತನಾಡಿದರು, ಜೇನು ಕೃಷಿ ತರಬೇತುದಾರರಾದ ರಾಧಾಕೃಷ್ಣ ಕೋಡಿ ಹಾಗೂ ಬೆಳ್ತಂಗಡಿ ಚಿಂತನಾ ಹನಿ ಭೀ ಫಾರ್ಮ್ ನ ಅಶೋಕ್ ಕುಮಾರ್ ಜೀ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.


ಬಂದಾರು ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ ಇವರು ಉಪಸ್ಥಿತರಿದ್ದರು.


ಅರುಣಾ ದೇವಿಪ್ರಸಾದ್ ಮತ್ತು ಅಶ್ವಿನಿ ಜಯ ಪ್ರಸಾದ್ ಪ್ರಾರ್ಥನೆ ನೆರವೇರಿಸಿದರು, ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಹೆಚ್ಚಿನ ಜನರು ಜೇನು ಕೃಷಿಯ ಸಮರ್ಪಕ ಮಾಹಿತಿ ಪಡೆದುಕೊಂಡರು.

Leave a Reply

Your email address will not be published. Required fields are marked *