Mon. Nov 25th, 2024

Lucknow: ಕ್ಲಿನಿಕ್‌ ಗೆ ಬಂದ ಮಹಿಳೆಯೊಂದಿಗೆ ಲವ್ವಿಡವ್ವಿ – ಪ್ರೀತಿಯ ನಾಟಕವಾಡಿ ಬಲವಂತವಾಗಿ ಮತಾಂತರ – ಮಹಿಳೆ ಜೊತೆ ಎಂಜಾಯ್‌ ಮಾಡಿ ಇರ್ಫಾನ್ ಪರಾರಿ -ಆದ್ರೆ ಆಮೇಲೆ ಈತ ಮಾಡಿದ್ದೇನು ಗೊತ್ತಾ?!

ಲಕ್ನೋ:(ನ.25) ಮೊದಲ ಗಂಡನಿಗೆ ವಿಚ್ಛೇದನ ಕೊಡಿಸುವಂತೆ ಪ್ರೇರೆಪಿಸಿ, ಪ್ರೀತಿಯ ನಾಟಕವಾಡಿ, ಮತಾಂತರಗೈದ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಮತಾಂತರಗೊಳಿಸಿ ಮದುವೆಯಾದ ಮುಸ್ಲಿಂ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಇದನ್ನೂ ಓದಿ: 🔴ಬೆಳ್ತಂಗಡಿ: ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ತನ್ನ ಮಗುವಿಗೆ ಸ್ಪೀಚ್ ಥೆರಪಿ ಮಾಡಿಸಲು ಮುಂಬೈನಿಂದ ಲಕ್ನೋಗೆ ಬಂದ ಮಹಿಳೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ. ಪ್ರೀತಿಯ ನಾಟಕವಾಡಿ ಮದುವೆಯಾದ ನಂತರ ಕೊಲೆಬೆದರಿಕೆ ಹಾಕಿದ್ದಾಗಿ ದೂರಿದ್ದಾಳೆ.

ಲಕ್ನೋದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಇರ್ಫಾನ್ ಅನ್ಸಾರಿ
ಮುಂಬೈನ ಥಾಣೆ ನಿವಾಸಿ 35 ವರ್ಷದ ಮಹಿಳೆ ಮೂರು ಮಕ್ಕಳ ತಾಯಿ. ಆಕೆಯ ಎಂಟು ವರ್ಷದ ಮಗನಿಗೆ ಮಾತು ಬರುತ್ತಿರಲಿಲ್ಲ. ಹೀಗಾಗಿ ಚಿಕಿತ್ಸೆಗೆಂದು ಲಕ್ನೋದ ಪಿಜಿಐ ಪ್ರದೇಶದಲ್ಲಿರುವ ಇರ್ಫಾನ್ ಅನ್ಸಾರಿಯ ಕ್ಲಿನಿಕ್‌ಗೆ ಬಂದಿದ್ದರು. ಈ ವೇಳೆ ಇರ್ಫಾನ್ ಜೊತೆ ಸ್ನೇಹ ಬೆಳೆಸಿದೆ. ಕ್ರಮೇಣ ಪ್ರೇಮ ಸಂಬಂಧಕ್ಕೆ ತಿರುಗಿದೆ.

ಪತಿಯನ್ನು ತೊರೆದು ಇರ್ಫಾನ್ ಜೊತೆ ನಿಖಾ
ಇರ್ಫಾನ್‌ನೊಂದಿಗೆ ಪ್ರೀತಿಯಲ್ಲಿ ಸಿಲುಕಿದ ಮಹಿಳೆ, ಮುಸ್ಲಿಂ ಯುವಕನ ಕುಮ್ಮಕ್ಕಿನಿಂದ ಹಸಮಣೆ ತುಳಿದ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದಾಳೆ. ಆ ನಂತರ ಇರ್ಫಾನ್ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸಲು ಪ್ರಾರಂಭಿಸಿದ್ದಾಳೆ. ಈ ಸಂಬAಧ ಸುಮಾರು 8 ತಿಂಗಳ ಕಾಲ ನಡೆದಿದೆ. ಈ ವೇಳೆ ಆರೋಪಿ ತನ್ನೊಂದಿಗೆ ಹಲವು ಬಾರಿ ದೈಹಿಕ ಸಂಬಂಧ ಹೊಂದಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.

ಬಲವಂತದ ಮತಾಂತರ..
ಲಿವಿಂಗ್ ರಿಲೇಶನ್ ಶಿಪ್‌ನಲ್ಲಿರುವಾಗಲೇ ಮಹಿಳೆ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ. ಈ ವೇಳೆ ಇರ್ಫಾನ್ ಮದುವೆಯಾಗಬೇಕಾದರೆ ಮುಸ್ಲಿಂ ಆಗಿ ಪರಿವರ್ತನೆ ಆಗಬೇಕು ಎಂದಿದ್ದಾನೆ. ನಂತರ ಬಲವಂತವಾಗಿ ಮಹಿಳೆ ಮತಾಂತರಗೊಂಡು ಅಕ್ಟೋಬರ್ 9 ರಂದು ಮುಂಬೈನ ಬಾಂದ್ರಾ ಕೋರ್ಟ್ನಲ್ಲಿ ವಿವಾಹವನ್ನು ಮಾಡಿಕೊಂಡಿದ್ದಾರೆ. ಇದಾದ ನಂತರ ಇಬ್ಬರೂ ಲಕ್ನೋದ ದೌಲತ್‌ನಗರ ಪ್ರದೇಶದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಾರೆ.

ಮದುವೆಯ ನಂತರ ಮುಖವಾಡ ಬಯಲು
ಮದುವೆಯಾದ ಎರಡು ತಿಂಗಳ ನಂತರ ಇರ್ಫಾನ್‌ನ ನಡವಳಿಕೆ ವಿಚಿತ್ರವಾಗಿದೆ. ಮಹಿಳೆಯಿಂದ ದೂರ ಆಗೋದಕ್ಕೆ ಮುಂದಾಗಿದ್ದಾನೆ. ನವೆಂಬರ್ 11 ರಂದು ಇರ್ಫಾನ್ ಯಾವುದೇ ಮಾಹಿತಿ ನೀಡದೆ ಮನೆ ಬಿಟ್ಟು ಹೋಗಿದ್ದಾನೆ. ವೃಂದಾವನ ಕಾಲೋನಿಯಲ್ಲಿರುವ ಖುಷ್ಬೂ ಪ್ಯಾಲೇಸ್‌ಗೆ ತೆರಳಿದ್ದಾನೆ. ಮಹಿಳೆ ಅಲ್ಲಿಗೆ ವಿಚಾರಿಸಿದಾಗ ಆತ ತನ್ನ ಪೋಷಕರ ಮನೆ ದೆಹಲಿಗೆ ಹೋಗಿದ್ದಾನೆ ಎಂದು ತಿಳಿದಿದೆ.

ನಿನ್ನನ್ನು ಮತ್ತು ಮಕ್ಕಳನ್ನು ಸಾಯಿಸುತ್ತೇನೆ
ಸಂತ್ರಸ್ತೆ ಇರ್ಫಾನ್‌ನನ್ನು ಫೋನ್‌ನಲ್ಲಿ ಸಂಪರ್ಕಿಸಿದಾಗ ಆತ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ನೀನು ನನ್ನನ್ನು ಬಿಟ್ಟು ಹೋಗು. ನನಗೆ ನಿನ್ನೊಂದಿಗೆ ಬದುಕಲು ಆಗುವುದಿಲ್ಲ. ನೀನು ಬಲವಂತ ಮಾಡಿದರೆ, ನಿನ್ನನ್ನೂ ನಿನ್ನ ಮಕ್ಕಳನ್ನೂ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಬಲವಂತವಾಗಿ ಮತಾಂತರ ಮಾಡಿ, ಅರ್ಧದಾರಿಯಲ್ಲಿ ಕೈಕೊಟ್ಟ ಇರ್ಫಾನ್ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆರೋಪಿ ವಿರುದ್ಧ ಮಹಿಳೆ ಪಿಜಿಐ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಆರಂಭಿಸಲಾಗಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು