Sat. Apr 19th, 2025

Belthangady: ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರ ಶುಭಹಸ್ತದಿಂದ ಸನಾತನದ ವಿಶೇಷ ಗ್ರಂಥ ಪ್ರದರ್ಶನಕ್ಕೆ ಚಾಲನೆ !

ಬೆಳ್ತಂಗಡಿ :(ನ.26) ಎಂಟು ಶತಮಾನಗಳ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ. ಈ ಕ್ಷೇತ್ರದಲ್ಲಿ ನವೆಂಬರ್ 26 ರಿಂದ 30 ರ ವರೆಗೆ ಲಕ್ಷದೀಪೋತ್ಸವವು ನಡೆಯಲಿದೆ.

ಇದನ್ನೂ ಓದಿ: 🟠ಬೆಳ್ತಂಗಡಿ: ವಕೀಲರ ಭವನದಲ್ಲಿ ಸಂವಿಧಾನ ದಿನಾಚರಣೆ

ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮದ ನಿಮಿತ್ತ ನವೆಂಬರ್ 26 ರಂದು ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಗ್ರಂಥ ಪ್ರದರ್ಶನಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರರಿಂದ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆ ಮಾಡಿದರು.

ಈ ಪ್ರದರ್ಶನದಲ್ಲಿ ಅಧ್ಯಾತ್ಮ, ಹಬ್ಬಗಳ ಆಚರಣೆಯ ಶಾಸ್ತ್ರ, ಹಿಂದೂ ಧರ್ಮದಲ್ಲಿ ಹೇಳಿದ ಜೀವನ ಶೈಲಿಯ ಶಾಸ್ತ್ರ ಈ ರೀತಿ ಮಾನವ ಕುಲಕ್ಕೆ ಉಪಯುಕ್ತ ಅಮೂಲ್ಯ ಗ್ರಂಥ ಸಂಪತ್ತು ಇದೆ, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರಿಗೂ ಈ ಗ್ರಂಥಗಳಲ್ಲಿನ ಜ್ಞಾನ ಅತ್ಯಾವಶ್ಯಕ ಆಗಿವೆ.

ಅಷ್ಟೆ ಅಲ್ಲದೆ ಈ ಪ್ರದರ್ಶನದಲ್ಲಿ ಸುಗಂಧ ಭರಿತ ವಿವಿಧ ಊದುಬತ್ತಿಗಳು, ಸುಗಂಧಭರಿತ ಸಾಬೂನು, ಉಟನೆ, ಶುದ್ಧ ಅರಿಷಿಣದಿಂದ ತಯಾರಿಸಿದ ಕುಂಕುಮ, ದೇವತೆಗಳ ಸಾತ್ವಿಕ ಭಾವ ಚಿತ್ರಗಳು, ಪಂಚಾಂಗ, ಸೇರಿದಂತೆ ಅನೇಕ ಉತ್ಪಾದನೆಗಳು ಲಭ್ಯವಿದ್ದು ಭಕ್ತರು ತಪ್ಪದೆ ಇಲ್ಲಿ ಭೇಟಿ ನೀಡಬೇಕೆಂದು ಸನಾತನ ಸಂಸ್ಥೆ ಕರೆ ನೀಡಿದೆ. ಈ ಪ್ರದರ್ಶನವು 55ನೆಯ ಮಳಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ , ಉಜಿರೆಯಲ್ಲಿ 26 ರಿಂದ 30 ಡಿಸೆಂಬರ್ ವರೆಗೆ ಎಲ್ಲರಿಗಾಗಿ ಉಪಲಬ್ಧವಿದೆ.

Leave a Reply

Your email address will not be published. Required fields are marked *