Thu. Dec 26th, 2024

ಉಡುಪಿ:(ನ.29) ವಿವಾಹಿತೆಯೊಬ್ಬರು ಮನೆಯಿಂದ ನಾಪತ್ತೆಯಾಗಿದ್ದು ಪತ್ತೆಗಾಗಿ ಮನವಿ‌ ಮಾಡಿದ್ದಾರೆ. ಪೂನಾ ಮೂಲದವರಾಗಿದ್ದು,

ಇದನ್ನೂ ಓದಿ: ⭕ಬೆಳ್ತಂಗಡಿ: ಮದುವೆಯಾಗ್ತೇನೆ ಅಂತ ಕೊರಗಜ್ಜನ ಮೇಲೆ ಆಣೆ ಮಾಡಿ ಕೈಕೊಟ್ಟ ಪ್ರಿಯಕರ

ಪಡುಬಿದ್ರೆಯ ಉಚ್ಚಿಲ ಬಡಾ ಗ್ರಾಮದ ಅಬ್ದುಲ್‌ ಅಜೀಜ್‌ ಅವರನ್ನು ವಿವಾಹವಾಗಿದ್ದ ಅಯಿಷಾ (33) ಅವರು ನ. 26ರಿಂದ ಮನೆ ಬಿಟ್ಟು ಹೋದವರು ಮನಗೆ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಮಗ ಹಾಗೂ ಗಂಡನೊಂದಿಗೆ ಗಲ್ಫ್ ರಾಷ್ಟ್ರದಲ್ಲಿದ್ದು, ಕಳೆದ 6 ತಿಂಗಳಿನಿಂದ ಅವರು ಬಡಾ ಗ್ರಾಮದಲ್ಲಿದ್ದರು. ತಾಯಿಯನ್ನು ಕರೆದುಕೊಂಡು ಅಬ್ದುಲ್‌ ಅಜೀಜ್‌ ಅವರು ನ. 26ರಂದು ಮಣಿಪಾಲದ ಆಸ್ಪತ್ರೆಗೆ ಹೋಗಿ ಮರಳಿ ಬರುವ ವೇಳೆ ಅಯಿಷಾ ಮನೆಯಲ್ಲಿ ಇರಲಿಲ್ಲ.

ಅಯಿಷಾ ಬಿಳಿ ಮೈಬಣ್ಣ ಹೊಂದಿದ್ದು, ಮುಖದಲ್ಲೊಂದು ಮಚ್ಚೆಯಿದೆ. ಕನ್ನಡಕವನ್ನು ಧರಿಸುತ್ತಾರೆ. 5.2 ಅಡಿ ಎತ್ತರವಿದ್ದು, ಬುರ್ಖಾ ಧರಿಸಿದ್ದ ಅವರು ಮರಾಠಿ, ಹಿಂದಿ, ಇಂಗ್ಲಿಷ್‌ ಹಾಗೂ ಬ್ಯಾರಿ ಭಾಷೆಯನ್ನು ಮಾತಾಡುತ್ತಾರೆ. ಅವರ ಬಗ್ಗೆ ಯಾರಿಗಾದರೂ ಸುಳಿವು ಲಭಿಸಿದ್ದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ (0820 2555452) ಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *