Mon. Feb 17th, 2025

Daily Horoscope: ಅಧಿಕಾರಿ ವರ್ಗದಿಂದ ಸಿಂಹ ರಾಶಿಯವರಿಗೆ ಒತ್ತಡ ಹೆಚ್ಚಾಗುವುದು!!!

ಮೇಷ ರಾಶಿ: ನಿಮ್ಮವರೇ ಆದರೂ ಸಲುಗೆ ಅತಿಯಾದೀತು. ನಿಮ್ಮ ಇಂದಿನ ಕಾರ್ಯವು ಜನರಿಂದ‌ ಮೆಚ್ಚುಗೆ ಪಡೆಯಬಹುದು. ಇಂದು ನಿಮ್ಮ ಜೀವನ ಸಂಗಾತಿಯನ್ನು ಆಶ್ಚರ್ಯಗೊಳಿಸುವಿರಿ. ಸಮಯ ನೋಡಿ ಸರಿಯಾದ ಮಾತನ್ನು ಆಡುವಿರಿ. ನಿಮ್ಮ ಎಲ್ಲ ಕಾರ್ಯವನ್ನು ಬಿಟ್ಟು ಇಂದು ನೀವು ಅವರ ಜೊತೆ ಸಮಯವನ್ನು ಕಳೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ.

ವೃಷಭ ರಾಶಿ: ಸ್ಪರ್ಧಾತ್ಮಕ‌ ಕಾರ್ಯಗಳಿಗೆ ಬಹಳ ಉತ್ಸಾವಿರುವುದು. ಗಂಧದ ಜೊತೆ ಗುದ್ದಾಟ‌ಮಾಡಿದರೆ ಮೈ ಸುಗಂಧವಾಗುವುದು. ಯಾವ ತೊಂದರೆಯನ್ನೂ ಹಂಚಿಕೊಳ್ಳಲಾರಿರಿ. ಕಛೇರಿಯ ಕಡೆಯಿಂದ ಭಡ್ತಿ ಸಿಗುವ ಸಂಭವವಿದೆ. ರಪ್ತು ಉದ್ಯಮದಲ್ಲಿ ನಿಮಗೆ ಲಾಭವಾಗುವುದು. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಫಲಿತಾಂಶ ಸಿಗದು. ಸಂಗಾತಿಯು ನಿಮಗೆ ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ಬೇಸರ ತರಿಸುವರು. ಮೈ ಚಳಿಯನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ನಿಮಗಾದ ಸಹಾಯವನ್ನು ನೀವು ಸ್ಮರಿಸಿಕೊಳ್ಳುವಿರಿ.

ಮಿಥುನ ರಾಶಿ: ದೃಷ್ಟಿ ದೋಷದ ಕಾರಣದಿಂದ ನಿಮಗೆ ಬೇಸರ ಉಂಟಾಗಬಹುದು. ನಿಧಾನವಾದರೂ ಇಂದಿನ ಕೆಲಸವನ್ನು ಮಾಡಿ.‌ ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲ‌ಪಡೆದವರು ನಿಮ್ಮನ್ನು ಪೀಡಿಸಬಹುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕ್ಕೆ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ. ನಿಮ್ಮದಲ್ಲದ ವಸ್ತುಗಳನ್ನು ಯಾರಿಗಾದರೂ ಕೊಡುವ ಮೊದಲು ಯೋಚಿಸಿ.

ಕರ್ಕಾಟಕ ರಾಶಿ; ವ್ಯವಹಾರದ ಪ್ರಜ್ಞೆ ಇಲ್ಲದವರ ಜೊತೆ ವ್ಯಾಪಾರ ಕಷ್ಟವಾಗಬಹುದು. ಇನ್ನೊಬ್ಬರನ್ನು ಬೆಳೆಸುವ ಉತ್ಸಾಹ ಯೋಜನೆ ನಿಮ್ಮಲ್ಲಿ ಇರುವುದು. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ಕೆಲವು ಕಾರ್ಯವನ್ನು ನೀವೇ ಹೋಗಿ ವಹಿಸಿಕೊಳ್ಳುವುದು ಸುಖ. ನಿಮಗೆ ಯಾವುದಾದರೂ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಕರೆ ಬರಬಹುದು. ಇಂದು ಸಾಲದಿಂದ ನೀವು ಮುಕ್ತರಾಗಿ ಸ್ವಲ್ಪ ನೆಮ್ಮದಿ ಪಡೆಯುವಿರಿ. ಕೃಷಿಕರು ತಮ್ಮ ಉತ್ಪನ್ನದಿಂದ ಅಲ್ಪ ಲಾಭ ಪಡೆವರು.

ಸಿಂಹ ರಾಶಿ: ಅಧಿಕಾರಿ ವರ್ಗದಿಂದ ಒತ್ತಡ ಹೆಚ್ಚಾಗುವುದು. ಪ್ರಯಾಣದಲ್ಲಿ ನಿಮಗೆ ಏನಾದರೂ ತೊಂದರೆ ಕಾಣಿಸೀತು. ನಿಮ್ಮ ಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಬಹುದು. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಯಾರನ್ನೋ ಸಂಶಯಿಸುತ್ತ ಕುಳಿತುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿ ಮಾತ್ರ ಹೇಳಿ.‌ ಇಂದಿನ ನಿಮ್ಮ ವ್ಯವಹಾರವು ಅಧಿಕವಾದ ಯಾವ ಲಾಭವನ್ನೂ ತಂದುಕೊಡದು.

ಕನ್ಯಾ ರಾಶಿ: ಬಹಳ ದಿನಗಳ ಅನಂತರ ಬಂಧುಗಳ ಭೇಟಿಯಾಗಲಿದೆ. ನಿಮ್ಮ ವಿರಾಮ ಸಮಯವನ್ನು ಯಾರಾದರೂ ಕಸಿದುಕೊಳ್ಳಬಹುದು. ನಿಮಗೆ ಸಂಬಂಧವಿಲ್ಲದ ವಿಚಾರದಲ್ಲಿ‌ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ. ಯಾರದೋ ಮಾತನ್ನು ಕೇಳಿ ಇಂದು ಕುಟುಂಬದವರ ಜೊತೆ ಕಲಹವಾಡುವಿರಿ. ನಿಮ್ಮ ತಿಳಿವಳಿಕೆಯನ್ನೇ ಪೂರ್ಣ ಸತ್ಯ ಎಂದು ತಿಳಿಯುವುದು ಬೇಡ. ಇಂದು ನಿಮಗೆ ಕಛೇರಿಯ ಕಾರ್ಯಗಳು ಅತಿಯಾಗುವುದು.

ತುಲಾ ರಾಶಿ: ಭೋಗವಸ್ತುವಿನಿಂದ ದುಃಖವಾಗುವುದು. ಭಿನ್ನ ಮನಸ್ಸುಗಳ ಜೊತೆ ನಿಮಗೆ ಹೊಂದಾಣಿಕೆ ಅಸಾಧ್ಯನಿಮ್ಮ ಮೇಲೆ ಇತರರ ದೃಷ್ಟಿ ಬೀಳುವ ಸಾಧ್ಯತೆ ಇರದು. ಜಾಣ್ಮೆಯು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ಹೆಚ್ಚು ಕಾಣಿಸಿಕೊಳ್ಳುವಿರಿ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು. ಹಣದ ಸಂಪಾದನೆಗೆ ವಿವಿಧ ಮಾರ್ಗಗಳು ಇದ್ದರೂ ಅದಾವುದೂ ನಿಮಗೆ ಸರಿ ಕಾಣಿಸದು.

ವೃಶ್ಚಿಕ ರಾಶಿ: ನಿಮ್ಮ ಸ್ಥಾನವು ಉನ್ನತವಾಗಲು ಆಸೆಪಡುವಿರಿ. ವಿದೇಶದ ವ್ಯವಹಾರದಲ್ಲಿ ನಿಮಗೆ ವ್ಯಾಪಕತೆ ಸಿಗಲಿದೆ. ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ‌‌ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು. ಭೂಮಿಯ ವ್ಯವಹಾರಕ್ಕೆ ಯಾರ ಜೊತೆಗಾದರೂ ಸೇರಿಕೊಳ್ಳುವಿರಿ. ಮಕ್ಕಳನ್ನು ಪಡೆಯುವ ಬಯಕೆ ಇರುವುದು.

ಧನು ರಾಶಿ: ಉಪ್ಪಿನ ಋಣವನ್ನು ತೀರಿಸುವ ಅವಕಾಶ ಬರಲಿದೆ. ಮಕ್ಕಳು ಧೃತಿಗೆಡದಂತೆ ಅವರಿಗೆ ಧೈರ್ಯವನ್ನು ತುಂಬುವ ಅನಿವಾರ್ಯತೆ ಇದೆ. ಪ್ರಭಾವೀ ವ್ಯಕ್ತಿಗಳಿಂದ ಇಂದಿನ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ನಂಬಿಕೆಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲ್ಲಿ ಹೆಚ್ಚು ಮಾತನಾಡುವಿರಿ. ಭೂವಿವಾದವಾಗುವ ಸಾಧ್ಯತೆ ಇದೆ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಚಿಂತಿಸುವುದು ಉತ್ತಮ. ನಿಮಗೆ ಅನೇಕ ವಿಚಾರಗಳಿಗೆ ಸಾಂತ್ವನ ಸಿಗಬಹುದು.

ಮಕರ ರಾಶಿ: ಗುರಿಯ ಬಗ್ಗೆ ನಿಮಗೆ ಸರಿಯಾದ ಚಿತ್ರಣ ಸಿಗದು. ದೈವಾನುಗ್ರಹವಿದ್ದರೆ ಏನನ್ನೂ ಸಾಧಿಸಬಹುದು ಎಂಬ ಆತ್ಮವಿಶ್ವಾಸವು ಇರುವುದು. ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಪವು ಹೆಚ್ಚಾಗಿರುವುದು. ದೇಹಾರೋಗ್ಯವು ಸರಿಯಾಗಿ ಇಲ್ಲದ ಕಾರಣ ಮನಸ್ಸು ಸರಿಯಾಗಿ ಕೆಲಸ ಮಾಡದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು. ಉದ್ಯೋಗವು ಸಾಕು ಎನಿಸಬಹುದು.‌ ಅತಿಯಾದ ಒತ್ತಡದಿಂದ ಹೊರಬರಲು ಸಹೋದ್ಯೋಗಿಗಳ ಸಹಾಯವನ್ನು ಪಡೆಯುವಿರಿ.

ಕುಂಭ ರಾಶಿ: ಇಂದು ನಿಮ್ಮ ಉನ್ನತ ಅಭ್ಯಾಸಕ್ಕೆ ಎಲ್ಲಿಂದಲಾದರೂ ಆರ್ಥಿಕ ಸಹಾಯವು ಬರಬಹುದು. ಇಂದಿನ‌ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ‌ ಉತ್ಸಾಹವನ್ನು ಜಾಗರೂಕಗೊಳಿಸುವುದು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ‌ ಸಮಯವನ್ನು ವ್ಯರ್ಥ ಮಾಡುವಿರಿ. ಮಾತಿನಲ್ಲಿ ಮಾರ್ದವವು ಇಲ್ಲವಾಗುವುದು. ಅತಿಯಾದ ಭಾರದ ವಸ್ತುಗಳನ್ನು ಒಯ್ಯುವಿರಿ. ನಿಮ್ಮ ಚೌಕಟ್ಟನ್ನು ಮೀರಿ ವರ್ತಿಸುವುದು ಬೇಡ. ಅಸಾಮಾನ್ಯ ವಿಚಾರವನ್ನು ಸರಳೀಕರಿಸುವಿರಿ. ಇಂದು ಕೆಲವು ವಿಚಾರಕ್ಕೆ ನಿಮ್ಮ ಆಲಸ್ಯವು ವರವಾಗುವುದು.

ಮೀನ ರಾಶಿ: ಹೊಸ ಯೋಜನೆಗಳು ನಿಮ್ಮ ಕೈ ಸೇರಬಹುದು. ನಿಮ್ಮ ನಿಮ್ಮಲ್ಲಿ ವಿನೀತ ಸ್ವಭಾವವಿದ್ದರೆ ಏನನ್ನೂ ಪಡೆಯಲು ಸಾಧ್ಯ. ನಿಮ್ಮನ್ನು ಭೇಟಿಯಾಗಲು ಬಂದವರನ್ನು ಸ್ತ್ರೀಯರು ನಿಮ್ಮ ಮೇಲೆ ಏನಾದರೂ ಆರೋಪ ಮಾಡಿಯಾರು. ಪಕ್ಷಪಾತ ಮಾಡುವುದು ಬೇಡ. ಸಂಬಂಧಿಸಿದ ವಿಚಾರಕ್ಕೆ ನಿಮ್ಮ ಸಮರ್ಥನೆ ಇರಲಿ. ಯಾರ ಮೇಲೂ ನಿಮ್ಮದೇ ಆದ ನಿಲು ವು ಬೇಡ. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ.‌ ನಿಮ್ಮ ಮನಸ್ಸು ಬಹಳ ದುರ್ಬಲವಾಗಿದ್ದು ಬಲಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ವ್ಯಾಪಾರದಲ್ಲಿ ಲಾಭವನ್ನೇ ಗಮನದಲ್ಲಿಟ್ಟು ಉಳಿದುದನ್ನು ಮರೆಯುವಿರಿ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು