ಉಜಿರೆ:(ಡಿ.3) ಶೃಂಗೇರಿ ಜಗದ್ಗುರು ಗಳ ಸನ್ನಿಧಿಯಲ್ಲಿ ಡಿ.1 ರಂದು ನಡೆದ ಭಗವದ್ಗೀತೆಯ 18 ಅಧ್ಯಾಯದ 700 ಶ್ಲೋಕಗಳ ಕಂಠಪಾಠ ಪರೀಕ್ಷೆ (ಗೀತಾ ಜ್ಞಾನ ಯಜ್ಞ )ಯಲ್ಲಿ ಕುಮಾರಿ ಅದ್ವಿತಿ ರಾವ್ ಪ್ರಥಮ ಶ್ರೇಣಿಯನ್ನು ಪಡೆದು ಶ್ರೀ ವಿಧುಶೇಖರ ಭಾರತೀ ಗುರುಗಳ ಆಶೀರ್ವಾದ ಪಡೆದಿರುತ್ತಾರೆ.
ಇದನ್ನೂ ಓದಿ:⭕ಬೆಂಗಳೂರು: ಪದೇ ಪದೇ ದೈವಾರಾಧನೆಗೆ ಅವಮಾನ
ಕುಮಾರಿ ಅದ್ವಿತಿ ರಾವ್ ಉಜಿರೆ ಸುರ್ಯ ಪಡ್ಪು ನಿವಾಸಿ ಅಶ್ವಥ್ ಮತ್ತು ಅಖಿಲಾ ದಂಪತಿಗಳ ಪುತ್ರಿಯಾಗಿದ್ದು, ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ(ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದಾಳೆ.
ಕುಮಾರಿ ಅದ್ವಿತಿ ರಾವ್ ಇವರಿಂದ ಭಗವದ್ಗೀತೆಯ 18 ಅಧ್ಯಾಯಗಳ ಕಂಠಪಾಠವು ಯು ಪ್ಲಸ್ ಟಿವಿ ಯಲ್ಲಿ ನೇರಪ್ರಸಾರಗೊಂಡಿತ್ತು.