ಉಡುಪಿ (ಡಿ.05): ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಸಮೀಪ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪದ ಹಿನ್ನಲೆ ಉಡುಪಿ ನಗರ ಪೊಲೀಸರು ದಿಢೀರ್ ರಾತ್ರಿ ಕಾರ್ಯಾಚರಣೆ ನಡೆಸಿ ಪರಿಸೀಲನೆ ನಡೆಸಿದರು.
ಇದನ್ನೂ ಓದಿ: Aries to Pisces: ವೃಷಭ ರಾಶಿಯವರ ರಹಸ್ಯವನ್ನು ಬೇರೆಯವರು ತಿಳಿದುಕೊಳ್ಳಲು ಬಯಸುವರು!!!!
ಉಡುಪಿ ಇನ್ಸ್ಪೆಕ್ಟರ್ ರಾಮಚಂದ್ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ರಾತ್ರಿ ವೇಳೆ ನಗರದ ಬಸ್ ನಿಲ್ದಾಣ ಆಸುಪಾಸು ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನಲೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಈ ವೇಳೆ ಬಸ್ ನಿಲ್ದಾಣ ಪರಿಸರದಲ್ಲಿ ತಡ ರಾತ್ರಿಯವರೆಗೂ ನಿಂತಿದ್ದ ಜನರನ್ನು ಹೊರಗೆ ಕಳುಹಿಸಿದರು. ಅಲ್ಲದೆ ತಡರಾತ್ರಿ ಓಡಾಡುತ್ತಿದ್ದ ಜನರಿಗೆ ಎಚ್ಚರಿಕೆ ನೀಡಿದರು.