ಚಿಕ್ಕಮಗಳೂರು:(ಡಿ.7) ದತ್ತಪೀಠ ವಿವಾದಕ್ಕೆ ಅಂತಿಮ ತೀರ್ಮಾನ ಇನ್ನು ಆಗಲಿಲ್ಲ. ಇತ್ತೀಚೆಗಷ್ಟೇ ಕುಂಕುಮ ಲೇಪನ ವಿಚಾರದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ವಾಗ್ವಾದಗಳು ನಡೆದಿತ್ತು.
ಇದನ್ನೂ ಓದಿ: ಉಜಿರೆ: “ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳ (ಐಎನ್‌ಎಸ್‌ಇಎಫ್) 2024-25”
ಇದೀಗ ವಿಶ್ವ ಹಿಂದು ಪರಿಷತ್, ಭಜರಂಗದಳ ನೇತೃತ್ವದಲ್ಲಿ ದತ್ತಪೀಠದಲ್ಲಿ ದತ್ತಜಯಂತಿ ಆಚರಣೆ ನಡೆಯಲಿದೆ. ಆದ್ದರಿಂದ ಈ ನಾಲ್ಕು ದಿನಗಳ ಕಾಲ ಪ್ರವಾಸಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಆದೇಶದ ಪ್ರಕಾರ ಡಿ.11ರಿಂದ 14ರ ವರೆಗೆ ನಾಲ್ಕು ದಿನಗಳ ಕಾಲ ಮುಳ್ಳಯನಗಿರಿ, ದತ್ತಪೀಠ, ಸೀತಾಳಯ್ಯನಗರಿ,
ಗಾಳಿಕೆರೆ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತದಿಂದ ಪ್ರವೇಶಕ್ಕೆ ಸಂಪೂರ್ಣ ನಿಷೇಧವನ್ನು ಹೊರಡಿಸಿದ್ದಾರೆ. ಡಿ.15ರ ಬೆಳಿಗ್ಗೆ 10 ಗಂಟೆಯ ನಂತರ ಪ್ರವಾಸಿಗರಿಗೆ ಈ ಭಾಗ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಒಂಭತ್ತು ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮದ ಹಿನ್ನೆಲೆ ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಸಂದರ್ಭ ವಿವಿಧ ಕಾರ್ಯಕ್ರಮಗಳು ಕೂಡಾ ನಡೆಯಲಿದೆ.
ಮುಂಜಾಗ್ರತಾ ಕ್ರಮವಾಗಿ ವಾಹನ ದಟ್ಟಣೆ ಆಗದಂತೆ, ಮಾಲಾಧಾರಿಗಳ ನಡುವೆ ನೂಕುನುಗ್ಗಲು ಆಗುವುದನ್ನು ತಡೆಯಲು ಭದ್ರತಾ ದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮವನ್ನು ಕೈಗೊಂಡಿದೆ.
14ರಂದು ರಾಜ್ಯದ ವಿವಿಧೆಡೆಯಿಂದ 25 ಸಾವಿರಕ್ಕೂ ಅಧಿಕ ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದರ್ಶನವನ್ನು ಪಡೆಯಲಿದ್ದಾರೆ. ಕಾರ್ಯಕ್ರಮ ಮುಗಿಯುವವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಸುರಕ್ಷತೆಯ ನಿಟ್ಟಿನಲ್ಲಿ ನಿಯೋಜನೆ ಮಾಡಲಾಗಿದೆ.