Thu. Dec 26th, 2024

Ujire: ಜ.1 ರಿಂದ ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಚಿಕಿತ್ಸೆ

ಉಜಿರೆ: (ಡಿ.7) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನವರಿ.1 ರಿಂದ ಉಚಿತ ಡಯಾಲಿಸಿಸ್ ಚಿಕಿತ್ಸೆ ಲಭ್ಯವಿದೆ.

ಇದನ್ನೂ ಓದಿ: ಮಂಗಳೂರು : ಹಿಂದೂ ಹೆಸರನ್ನಿಟ್ಟುಕೊಂಡು ಮಹಿಳೆ ಜೊತೆ ಸ್ನೇಹ

ಈ ಕುರಿತು ಆಸ್ಪತ್ರೆಯ ಎಂ.ಡಿ ಆಗಿರುವ ಜನಾರ್ದನ್ ಅವರು ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ|.ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನದಲ್ಲಿ ಉಚಿತ ಡಯಾಲಿಸಿಸ್ ಸೇವೆಯನ್ನು ಘೋಷಿಸಿದ್ದಾರೆ.

ಈ ಸೇವೆಯು ಆಸ್ಪತ್ರೆಯಲ್ಲಿ ಜನವರಿ 1 ಆರಂಭವಾಗಲಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಎಲ್ಲಾ ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಅವರು ಮನವಿ ಮಾಡಿದರು.

ದುಬಾರಿ ಡಯಾಲಿಸಿಸ್‌ ಚಿಕಿತ್ಸೆಯನ್ನು ಪಡೆಯಲು ಹೆಣಗಾಡುತ್ತಿರುವ ರೋಗಿಗಳ ಪಾಲಿಗೆ ಇದು ವರದಾನವಾಗಿದೆ.

Leave a Reply

Your email address will not be published. Required fields are marked *