ಬಂಟ್ವಾಳ:(ಡಿ.8) ಡಿವೈಡರ್ ಗೆ ಡಿಕ್ಕಿ ಹೊಡೆದು ಪಿಕಪ್ ವಾಹನ ಪಲ್ಟಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಸರ್ಕಲ್ ನ ಸಮೀಪ ನಡೆದಿದೆ.
ಇದನ್ನೂ ಓದಿ: ಗುಜರಾತ್: ಕೈದಿಯ ಗುದನಾಳದಲ್ಲಿ ಪತ್ತೆಯಾದ ಮೊಬೈಲ್ ಫೋನ್
ಮಂಗಳೂರು ಕಡೆಯಿಂದ ಮೆಲ್ಕಾರ್ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನ ಬಿಸಿರೋಡಿನ ಸರ್ಕಲ್ ನಿಂದ ಸ್ವಲ್ಪ ದೂರ ಸಾಗಿ ಚತುಷ್ಪತ ಕಾಂಕ್ರೀಟ್ ರಸ್ತೆಗೆ ಮಧ್ಯೆ ಹಾಕಲಾದ ಡಿವೈಡರ್ ಮೇಲೇರಿ ಅಲ್ಲೇ ಪಲ್ಟಿಯಾಗಿದೆ.
ಘಟನೆಯಲ್ಲಿ ಚಾಲಕ ಯಾವುದೇ ಗಾಯವಾಗದೆ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಟ್ರಾಫಿಕ್ 2 ಎಸ್.ಐ.ಸಂಜೀವ, ಹೆಚ್ ಸಿ.ದೇವರಾಜ್ ಭೇಟಿ ನೀಡಿದ್ದಾರೆ.