ಕನ್ಯಾಡಿ:(ಡಿ.9) ಸರಕಾರಿ ಉನ್ನತೀಕರಿಸಿದ ಹಿ. ಪ್ರಾ ಶಾಲೆ ಕನ್ಯಾಡಿ ಯಲ್ಲಿ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶ್ರಮದಾನ ನಡೆಯಿತು.
ಶಾಲೆಯ ಸುತ್ತ ಮುತ್ತ ಮೆಷಿನ್ ಯಂತ್ರದಿಂದ ಹುಲ್ಲು ಗಳನ್ನು ಕಿತ್ತು ಸ್ವಚ್ಛತೆ ಗೊಳಿಸಿ ಶಾಲಾ ಮೈದಾನವನ್ನು ಸಮತಟ್ಟು ಮಾಡುವ ಕೆಲಸವನ್ನುನಿರ್ವಹಿಸಿದರು. ಶ್ರಮದಾನದಲ್ಲಿ ಹಳೆ ವಿದ್ಯಾರ್ಥಿಗಳು ಜೊತೆ ಗಿದ್ದು ಸಹಕರಿಸಿದರು.
ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಾದ ಸುರೇಶ್, ಜಯರಾಮ್ ಅರ್ವಿನ್ ಮಿರಾಂದ, ಗೋಪಾಲ್, ಒಲ್ವಿನ್ ಡಿಸೋಜ, ಹರೀಶ್, ಶೇಕ್ ಹರ್ಷದ್, ಕೇಶವ, ವಸಂತ, ಜೀವನ್ ಡಿಸೋಜ, ಜಯಂತಿ, ಸುಲೋಚನಾ, ಘಟಕ ಪ್ರತಿನಿಧಿಗಳಾದ, ಮೋಹನ್, ಮಂಜುನಾಥ್, ಸಂಯೋಜಕರಾದ ಕು ವಸಂತಿ. ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಹನುಮಂತರಾಯರವರು ,ಶಿಕ್ಷಕರಾದ ವಿಕಾಸ್ ರವರು, sdmc ಅಧ್ಯಕ್ಷರಾದ ನೋಣಯ್ಯ ಗೌಡ ರವರು ಉಪಸ್ಥಿತರಿದ್ದು, ಶೌರ್ಯ ತಂಡದ ಸೇವಾಕಾರ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರಿಗೂ ಅಭಿನಂನಂದಿಸಿದರು.
ಶಾಲಾ ಶಿಕ್ಷಕಿಯರು, ಶಾಲಾ ಮಕ್ಕಳು, ಶಾಲಾ ಮಕ್ಕಳ ಪೋಷಕರು ಶ್ರಮದಾನ ದಲ್ಲಿ ಭಾಗವಹಿಸಿದ್ದರು.