ಮಂಗಳೂರು:(ಡಿ.9) ಯುವತಿಯೋರ್ವಳಿಗೆ ಸಹಾಯ ಮಾಡಲು ಬಂದ ಅನ್ಯಕೋಮಿನ ಯುವಕ ಆಕೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಳೆದ ಜುಲೈ 21 ರಂದು ಯುವತಿಯ ಕಾರು ಕದ್ರಿಯಲ್ಲಿ ಕೆಟ್ಟು ನಿಂತಿತ್ತು. ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಕಾರನ್ನು ಸರಿಪಡಿಸಿದ್ದ. ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲ್ ಬೈಲ್‌ನ ಆಕೆಯ ಅಪಾರ್ಟ್ ಮೆಂಟ್ ಗೆ ಬಿಟ್ಟು ಬಂದಿದ್ದು,
ಈ ವೇಳೆ ಆಕೆಯ ಮೊಬೈಲ್ ನಂಬರ್ ಪಡೆದಿದ್ದ. ಯುವತಿ ಅಪಾರ್ಟ್ ಮೆಂಟ್ ನಲ್ಲಿ ಏಕಾಂಗಿಯಾಗಿದ್ದು ಆಗಸ್ಟ್ 1 ರಂದು ಯುವತಿಯ ಮನೆಯ ಫ್ರಿಡ್ಜ್ ಕೆಟ್ಟು ಹೋಗಿದ್ದು ಸಹಾಯಕ್ಕಾಗಿ ಶಫಿನ್ ಗೆ ಕರೆ ಮಾಡಿದ್ದಳು.
ಆತ ರಿಪೇರಿಯವರನ್ನು ಕರೆಸಿ ರಿಪೇರಿ ಮಾಡಿಸಿ ಕಳುಹಿಸಿದ್ದಾನೆ. ಬಳಿಕ ಆಕೆಗೆ ಹಣ್ಣು ಹಾಗೂ ಜ್ಯೂಸ್ ನೀಡಿದ್ದ, ಅದರಲ್ಲಿ ಮತ್ತು ಬರಿಸೋ ವಸ್ತು ಬೆರಸಿದ್ದರಿಂದ ಆಕೆ ಪ್ರಜ್ಞೆ ತಪ್ಪಿದ್ದಳು. ಬಳಿಕ ಆತ ದೈಹಿಕ ಸಂಪರ್ಕ ಬೆಳೆಸಿ,ವೀಡಿಯೋ ಮಾಡಿ ಮುಂದೆಯೂ ಸಹಕಾರ ನೀಡಬೇಕು,ಇಲ್ಲದಿದ್ದಲ್ಲಿ ವೀಡಿಯೋ ವೈರಲ್ ಮಾಡೋ ಬೆದರಿಕೆ ಹಾಕಿದ್ದ.
ಬಳಿಕ ಆತನ ಅಣ್ಣ ಮೊಹಮ್ಮದ್ ಶಿಯಾಬ್ ಎಂಬಾತನೂ ಮನೆಗೆ ಬಂದು ಅತ್ಯಾಚಾರಕ್ಕೆ ಯತ್ನಿಸಿದ್ದ,ಅಂದು ಆಕೆ ತಪ್ಪಿಸಿಕೊಂಡಿದ್ದು ಮನೆಯಲ್ಲಿದ್ದ 62 ಸಾವಿರ ರೂಪಾಯಿ ಕಳವು ಮಾಡಿದ್ದ.
ಬಳಿಕ ಇಬ್ಬರೂ ಸಹೋದರರು ವಿದೇಶಕ್ಕೆ ಪರಾರಿಯಾಗಿದ್ದರು. ಇದೀಗ ಯುವತಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.