Tue. Mar 25th, 2025

ಮೇಷ ರಾಶಿ: ಬೇಕಾದ ಕಡೆಯಲ್ಲಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲಾಗದು. ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣವನ್ನು ಎದುರಿಸುವಾಗ ಜಾಗರೂಕರಾಗಿರಿ. ಅಸ್ತವ್ಯಸ್ತವಾದ ವ್ಯವಹಾರವನ್ನು ಸುಸ್ಥಿತಿಗೆ ತರಲು ಪ್ರಯತ್ನಿಸುವಿರಿ.ದೇಹಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಕಾಣಿಸಿಕೊಳ್ಳುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು.

ವೃಷಭ ರಾಶಿ: ವಿದ್ಯಾಭ್ಯಾಸವನ್ನು ಮುಂದುವರಿಸುವುದು ಕಷ್ಟವಾಗಬಹುದು. ನಿಮ್ಮ ಸಣ್ಣ ವ್ಯಾಪಾರವನ್ನು ವಿಸ್ತರಿಸಲಿದ್ದೀರಿ. ನಿಮ್ಮನ್ನು ಕೇಳಿಕೊಂಡು ಯಾರಾದರೂ ಅಪರಿಚಿತರು ಬರಬಹುದು. ತೊಂದರೆಯನ್ನು ಎದುರಿಸಿ, ನಿಮ್ಮಷ್ಟಕ್ಕೆ ಸಮಾಧಾನ ತಂದುಕೊಳ್ಳುವಿರಿ. ಯಾರನ್ನಾದರೂ ಕಳೆದುಕೊಳ್ಳುವ ಭೀತಿಯು ಇರಲಿದೆ. ನಿಮಗೆ ನೆರವು ಬೇಕಾಗಿದ್ದರೂ ಇನ್ನೊಬ್ಬರ ಸಹಾಯಕ್ಕೆ ಹೋಗುವಿರಿ. ನಿಮ್ಮ ವಿರೋಧಿಗಳ ಸಂಖ್ಯೆ ಕಡಿಮೆಯಾಗುವುದು. ನಿಮ್ಮ ಇಂದಿನ ಕಾರ್ಯವು ಕ್ರಮಬದ್ಧವಾಗಿ ಇರಲಿ. ಮಾಡಿದ ತಪ್ಪನ್ನೇ ಮತ್ತೆ ಮಾಡಿ ಮನೆಯಲ್ಲಿ ಬೈಸಿಕೊಳ್ಳುವಿರಿ. ಆರೋಗ್ಯವಾಗಿ ಇರಬೇಕೆಂದು ಹೆಚ್ಚು ನಿದ್ರೆ ಮಾಡುವಿರಿ.

ಮಿಥುನ ರಾಶಿ: ಅವಕಾಶಗಳು ನಿಮಗೆ ಬಾಗಿಲು ಹಾಕಿದಂತೆ ಭಾಸವಾಗುವುದು. ದುರಭ್ಯಾಸವು ಜಗಜ್ಜಾಹಿರಾಗಬಹುದು. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ನಿಮ್ಮ ಪ್ರೀತಿಗೆ ಇಂದು ಅಧಿಕೃತ ಮುದ್ರೆಯು ಬೀಳಲಿದ್ದು ನಿಮಗೆ ಖುಷಿಯಾಗಲಿದೆ. ನಿಮ್ಮ ವೃತ್ತಿಯ ಕುರಿತು ಯಾರಾದರೂ ಕೇಳಿಯಾರು. ಆದಾಯವನ್ನೂ ಕೇಳಬಹುದು. ಉನ್ನತ ವಿದ್ಯಾಭ್ಯಾಸವು ಯಶಸ್ವಿಯಾಗಿ ಪೂರೈಸುವಿರಿ. ವಿದೇಶದ ವ್ಯವಹಾರವು ನಿಮಗೆ ಸರಿಯಾಗಿ ಆಗಿಬರದು.

ಕರ್ಕಾಟಕ ರಾಶಿ: ಪುತ್ರಶೋಕವನ್ನು ಪಡೆಯುವ ಹಂತಕ್ಕೆ ಹೋಗುವಿರಿ. ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಸುತ್ತಲಿನ ಮಾತುಕತೆಗಳನ್ನು ಗಮನಿಸುತ್ತಿರಿ. ಇಂದು ನಿಮ್ಮ ಮನಸ್ಸು ಅದರಲ್ಲಿಯೇ ಮುಳುಗಿ ಇರುವುದು. ಒಂದು ರೀತಿಯಲ್ಲಿ ನಿಮಗೆ ಆತಂಕದ ದಿವಸವೂ ಆಗಬಹುದು. ಸಾಹಿತ್ಯಾಸಕ್ತರು ತಮ್ಮ ಬಳಗದ ಜೊತೆ ಹೆಚ್ಚು ಸಮಯ ಇರುವರು. ಎಲ್ಲರೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡಲಿದ್ದು ನೀವು ಹತಾಶೆಯ ಭಾವ ಜಾಗೃತವಾಗಿ ಖಿನ್ನತೆಗೂ ಹೋಗಬಹುದು. ಜವಾಬ್ದಾರಿಯನ್ನು ನೀವು ನಿಭಾಯಿಸಲೂ ನಿಮಗೆ ಕಷ್ಟವಾದೀತು. ದೈವದ ಬಗ್ಗೆ ನಿಮಗೆ ಅಪನಂಬಿಕೆ ಬರುವುದು.

ಸಿಂಹ ರಾಶಿ: ಯಾರಿಂದಲಾದರೂ ಆಗುವ ಕಾರ್ಯವನ್ನು ಬೆಂಬಿಡದೇ ಮಾಡುವಿರಿ. ಪರಿಮಳವಿರುವ ಹೂವನ್ನೂ ಯಾರೂ ಪರಿಚಯಿಸಬೇಕಿಲ್ಲ. ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವುದು ಕಷ್ಟವಾದೀತು. ಆಡಂಬರಕ್ಕೆ ಹೆಚ್ಚು ಒತ್ತು ನೀಡುವಿರಿ. ಸಾರ್ವಜನಿಕ ಮನ್ನಣೆಯನ್ನು ಗಳಿಸುವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು. ಏಕಾಗ್ರ ಮನಸ್ಸಿನಿಂದ ನೀವು ಇಂದಿನ ಕೆಲಸದಲ್ಲಿ ತೊಡಗುವಿರಿ. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಯನ್ನು ಹೆಚ್ಚು ಮಾಡುವುದು. ಜಾಣ್ಮೆಯ ವ್ಯವಹಾರವನ್ನು ಇಂದು ಮಾಡಬೇಕಾದೀತು. ಒಂದೇ ಶ್ರಮಕ್ಕೆ ಎರಡು ಫಲವನ್ನು ನೀವು ಪಡೆಯುವಿರಿ.

ಕನ್ಯಾ ರಾಶಿ: ಮರಗೆಲಸದಲ್ಲಿ ನೀವು ಕೌಶಲ್ಯ ತೋರಿಸುವಿರಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಹರ್ಷ. ನಿಮ್ಮ ಹಳೆಯ ಪ್ರತಿಜ್ಞೆಯನ್ನು ಇಂದು ಪೂರ್ಣ ಮಾಡಿದ ಸಂತೋಷವು ಇರುವುದು. ವಿವಾಹದ ಸುಖದಲ್ಲಿ ನೀವಿರುವಿರಿ. ಸಕಾರಾತ್ಮಕ ಆಲೋಚನೆಯನ್ನು ಪ್ರಯತ್ನಪೂರ್ವಕವಾಗಿ ಮಾಡುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ. ವಿದ್ಯುತ್ ಉಪಕರಣಗಳ ಖರೀದಿಯನ್ನು ಮಾಡುವಿರಿ.

ತುಲಾ ರಾಶಿ: ದಿಕ್ಕು ತೋಚದೇ ಸ್ತಬ್ಧರಾಗುವ ಸ್ಥಿತಿ ಬರಬಹುದು. ಇಂದಿನ ನಿಮ್ಮ ಕಾರ್ಯಗಳಿಗೆ ಜೊತೆಗಾರರು ಸಿಗಬಹುದು. ಮನಃಸ್ಥಿತಿಯು ಸರಿ ಇಲ್ಲದ ಕಾರಣ ನೌಕರರ‌ ಮೇಲೆ ಸಿಟ್ಟಾಗುವಿರಿ. ಸಂಗಾತಿಯ ಮಾತಿಗೆ ಸ್ಪಂದನೆಯೂ ಇರದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು. ಪಿತ್ರಾರ್ಜಿತ ಆಸ್ತಿಗಾಗಿ ನೀವು ಆಸೆ ಪಡುವಿರಿ. ನಿಮ್ಮ ಚರಾಸ್ತಿಯು ನಷ್ಟವಾಗುವುದು. ಉದ್ಯೋಗದ ಸ್ಥಳದಲ್ಲಿ ನೀವು ಹೆಚ್ಚು ಓಡಾಟ ಮಾಡಬೇಕಾದೀತು.

ವೃಶ್ಚಿಕ ರಾಶಿ: ಅದಮ್ಯ ಚೈತನ್ಯವನ್ನು ಹೊರಹಾಕುವ ಕಾಲ ಬರಬಹುದು. ಯಶಸ್ಸಿಗಾಗಿಯೇ ಮಾಡುವ ಕಾರ್ಯದಿಂದ ಅಪಯಶಸ್ಸು ಸಿಗುವುದು. ಸರ್ಕಾರಿ ಉದ್ಯೋಗಿಗಳಿಗೆ ಇನ್ನೊಂದಿಷ್ಟು ಜವಾಬ್ದಾರಿಯು ಬರಬಹುದು. ಉತ್ತಮ‌ ಸ್ನೇಹಿತರನ್ನು ಸಂಪಾದಿಸಿಕೊಳ್ಳಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು.

ಧನು ರಾಶಿ: ನಿಮ್ಮ ಪರವಾಗಿ ಯಾರೂ ನಿಲ್ಲದಿರುವುದು ಬೇಸರ ತರಿಸಬಹುದು. ಇತರರ ಕೆಂಗಣ್ಣಿಗೆ ಬೀಳಬಹುದು. ನಿಮ್ಮ ಕಾರ್ಯವು ವಿಳಂಬವಾಗಲು ಕಾರ್ಮಿಕರು ಕಾರಣವಾಗುವರು. ಅವರ ಮೇಲೆ ಸಿಟ್ಟಗುವಿರಿ. ಮಾತಿನ ಮಿತಿಯನ್ನೂ ಮೀರಬಹುದು. ಹೂಡಿಕೆಯ ಚಿಂತನೆಯನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಪಕ್ಷಪಾತ ಮನಃಸ್ಥಿತಿಯು ನಿಮಗೆ ಶೋಭೆ ತರದು. ಈ ದಿನವನ್ನು ಕಳೆಯಲು ನೀವು ನಾನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ.

ಮಕರ ರಾಶಿ: ತಪ್ಪಿಗೆ ಹಿರಿಯರ ಮುಂದೆ ಕೈಕಟ್ಟಿ ಕುಳಿತುಕೊಳ್ಳಬೇಕಾಗುವುದು. ನಿಮಗೆ ಇಷ್ಟವಾಗದ ಕಾರ್ಯವನ್ನು ಎಷ್ಟೇ ಒತ್ತಾಯ ಮಾಡಿದರೂ ಮಾಡಲಾರಿರಿ. ನಿಮಗೆ ಇಂದು ದಣಿವಾಗುವ ಸಾಧ್ಯತೆ ಹೆಚ್ಚಿದೆ. ಕ್ರಿಯಾಶೀಲತೆಯನ್ನು ನೀವು ಬಿಟ್ಟಿರುವುದು ನಿಮ್ಮ ಮನಸ್ಸಿಗೆ ಬರಲಿದೆ. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ಸಾಲ ಕೊಟ್ಟವರು ಏನೂ ಹೇಳದೇ ಇರುವುದರಿಂದ ನಿಮಗೆ ಸ್ವಲ್ಪ ನೆಮ್ಮದಿ ಸಿಗಲಿದೆ.

ಕುಂಭ ರಾಶಿ: ತಾತ್ಕಾಲಿಕ ಉದ್ಯೋಗವನ್ನು ಕೈಬಿಡುವಿರಿ. ಇಂದು ನೀವು ಅತಿಯಾದ ಒತ್ತಡವನ್ನು ತಂದುಕೊಳ್ಳುವ ಅಗತ್ಯ ಇಲ್ಲ. ನೀವು ನೆಪವೊಡ್ಡಿ ಯಾವುದೇ ಕಾರ್ಯದಲ್ಲಿ ತೊಡಗಲಾರಿರಿ. ಅವಕಾಶ ಸಿಕ್ಕಾಗ ಮುನ್ನುಗ್ಗಲು ಹಿಂಜರಿಯುವಿರಿ. ಮನೋವ್ಯಥೆಯಿಂದ ನಿಮಗೆ ಬಹಳಷ್ಟು ತೊಂದರೆಗಳು ಬರಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು. ಮಕ್ಕಳ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದುದು ಬಹಳಷ್ಟು ಇವೆ.

ಮೀನ ರಾಶಿ; ಏನೂ ಇಲ್ಲದೇ ದಿನವನ್ನು ಕಳೆಯುವುದು ಕಷ್ಟವಾಗುವುದು. ನಿಮಗೆ ಇಂದು ವಿಶ್ರಾಂತಿಯನ್ನು ಪಡೆಯುವ ಕಾಲ. ಇಂದು ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ತಾರತಮ್ಯ ಭಾವವನ್ನು ತೋರಿಸಬೇಡಿ. ನಿಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ಪ್ರಾಪ್ತವಾಗುವುದು. ದಿನದ ಆರಂಭದಲ್ಲಿ ಆಲಸ್ಯ ತೋರಿದರೂ ಅನಂತರ ಉತ್ಸಾಹದಿಂದ ಇರುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ಮೂರನೇ ವ್ಯಕ್ತಿಗಳ ಮೂಲಕ ಇಂದು ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ.

Leave a Reply

Your email address will not be published. Required fields are marked *