ಬೆಳ್ತಂಗಡಿ:(ಡಿ.12) ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ವಾಣಿ ಪದವಿ ಪೂರ್ವ ಕಾಲೇಜು ಹಳೆಕೋಟೆ ಬೆಳ್ತಂಗಡಿ ಇದರ ಇಪ್ಪತ್ತನೇ ವರ್ಷದ ಸಂಭ್ರಮಾಚರಣೆಯ “ವಿಂಶತಿ” ಕಾರ್ಯಕ್ರಮದಲ್ಲಿ ಕುಮಾರಿ ಅನುಕ್ಷಾ ಇವರು

ಇದನ್ನೂ ಓದಿ: ಉಜಿರೆ: ವಿಲೋನಾ ಡಿಕುನ್ಹ ಗೆ “ಮ್ಯಾನ್ ಆಫ್ ದಿ ಮ್ಯಾಚ್” ಪ್ರಶಸ್ತಿ
ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸೆಪ್ಟೆಂಬರ್ 17ರಿಂದ 23ರ ವರೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ 2024-25 ನೇ ಸಾಲಿನ ಶಿಬಿರದಲ್ಲಿ ಭಾಗವಹಿಸಿ ಪ್ರಹಸನ ವಿಭಾಗದಲ್ಲಿ



ಸಮಾಧಾನಕರ ಬಹುಮಾನ ಮತ್ತು ಜಾನಪದ ಗಾಯನದಲ್ಲಿ ತೃತೀಯ ಬಹುಮಾನವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುವುದರಿಂದ ಇವರನ್ನು ಕಾಲೇಜು ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಬ್ರಹ್ಮಶ್ರೀ ಕುಣಿತ ಭಜನೆ ಮಂಡಳಿ ಬಳಂಜ ಇದರ ಸಂಚಾಲಕರು, ಅಧ್ಯಕ್ಷರು, ಸರ್ವ ಸದಸ್ಯರು ಅನುಕ್ಷ ಪೂಜಾರಿ ಯವರಿಗೆ ಅಭಿನಂದನೆಯನ್ನು ತಿಳಿಸಿದರು.

